ವಿಷ್ಣು ಮಂಚು “ಕಣ್ಣಪ್ಪ” ಚಿತ್ರಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್; ಪಾತ್ರ ಏನಿರಬಹುದು?

ವಿಷ್ಣು ಮಂಚು “ಕಣ್ಣಪ್ಪ” ಚಿತ್ರಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್; ಪಾತ್ರ ಏನಿರಬಹುದು?

ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ತೆಲುಗಿನ ಕಣ್ಣಪ್ಪ ಸಿನಿಮಾ. ಆಗೊಬ್ಬರು ಈಗೊಬ್ಬರು ಈ ಚಿತ್ರದ ತಾರಾಬಳಗ ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೋರ್ವ ಸ್ಟಾರ್‌ ಈ ತಂಡ ಸೇರಿಕೊಂಡಿದ್ದಾರೆ. ಅದು ಬೇರಾರು ಅಲ್ಲ, ನಟಿ ಕಾಜಲ್‌ ಅಗರ್‌ವಾಲ್! ವಿಷ್ಣು ಮಂಚು ಮತ್ತು ಕಾಜಲ್ ಅಗರ್ವಾಲ್ ಈ ಹಿಂದೆ ತೆಲುಗಿನ ಮೊಸಗಲ್ಲು ಚಿತ್ರದಲ್ಲಿ ಸಹೋದರ ಮತ್ತು ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಿಷ್ಣು ಮಂಚು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್‌ ಕಣ್ಣಪ್ಪ ಚಿತ್ರಕ್ಕೂ ಆಗಮಿಸುವ ಮೂಲಕ ಎರಡನೇ ಸಲ ಒಂದಾಗುತ್ತಿದ್ದಾರೆ. ಹಾಗಾದರೆ,…

ವಿಷ್ಣು ಮಂಚು ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್”.

ವಿಷ್ಣು ಮಂಚು ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್”.

ಮೋಹನ್‍ ಬಾಬು, ಮೋಹನ್‍ ಲಾಲ್‍, ಶಿವರಾಜಕುಮಾರ್, ಪ್ರಭಾಸ್‍ ಮುಂತಾದ ಈ ದೇಶದ ಪ್ರತಿಭಾವಂತ ಕಲಾವಿದರ ನಡುವೆ ‘ಕಣ್ಣಪ್ಪ’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವವರು ಟಾಲಿವುಡ್‍ ನಟ ವಿಷ್ಣು ಮಂಚು. ಇಂದು ತಮ್ಮ ಹುಟ್ಟುಹಬ್ಬವನ್ನು ವಿಷ್ಣು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ಅವರ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಇನ್ನಷ್ಟು ಅದ್ದೂರಿಯಾಗಿಸುವುದರ ಜೊತೆಗೆ ನೆನಪಿನಲ್ಲುಳಿಯುವಂತೆ ಮಾಡಿದೆ.ಮುಕೇಶ್‍ ಕುಮಾರ್ ಸಿಂಗ್‍ ನಿರ್ದೇಶನದ ‘ಕಣ್ಣಪ್ಪ’ ಚಿತ್ರದ ಶೇ.80ರಷ್ಟು ಚಿತ್ರೀಕರಣ ನ್ಯೂಜಿಲ್ಯಾಂಡ್‍ನ ರಮಣೀಯ ಪ್ರದೇಶಗಳಲ್ಲಿ ನಡೆದಿದ್ದು, ಹಾಲಿವುಡ್‍ ಛಾಯಾಗ್ರಾಹಕ ಶೆಲ್ಡನ್‍…