“ಪೆದರಾಯುಡು” ಚಿತ್ರಕ್ಕೆ 30 ವರ್ಷದ ಸಂಭ್ರಮದ ಬೆನ್ನಲ್ಲೇ, ವಿಷ್ಣು ಮಂಚು ಅಭಿನಯದ “ಕಣ್ಣಪ್ಪ” ಚಿತ್ರ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್.
ಕಳೆದ 30 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣಗಳು ಮತ್ತು ಚಿತ್ರರಂಗದ ಸಂಭ್ರಮದ ನಡುವೆ, ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಟ ಮೋಹನ್ ಬಾಬು ಚೆನ್ನೈನಲ್ಲಿ ಮತ್ತೆ ಒಂದಾದರು. ಇದಕ್ಕೆ ಕಾರಣ; “ಪೆದರಾಯುಡು” ಸಿನಿಮಾ. ಈ ಚಿತ್ರ ಜೂನ್ 15, 1995ರಂದು ತೆರೆಕಂಡಿತ್ತು. ಇದೀಗ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು ವಿಷ್ಣು ಮಂಚು ನಟನೆಯ “ಕಣ್ಣಪ್ಪ” ಸಿನಿಮಾ ವೀಕ್ಷಿಸಿ ಹಳೇ ನೆನಪಿಗೆ ಹೊರಳಿದರು. ರವಿ ರಾಜ ಪಿನಿಸೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ…