“ಸಂಗೀತ ಎಂಬುದು ಸಾಗರದಷ್ಟೇ ಆಳ, ಅಷ್ಟೇ ವಿಶಾಲ.. ಕಲಿತಷ್ಟು ಇಲ್ಲಿ ಹೊಸದು ಸಿಗುತ್ತಲೇ ಹೋಗುತ್ತದೆ” ಸಂಗೀತ ನಿರ್ದೇಶಕ ಚೇತನ್‌ ರಾವ್‌”. ತಮ್ಮ ಸಂಗೀತದ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಕಂಪೂಸರ್‌ ಚೇತನ್‌ ರಾವ್‌.

“ಸಂಗೀತ ಎಂಬುದು ಸಾಗರದಷ್ಟೇ ಆಳ, ಅಷ್ಟೇ ವಿಶಾಲ.. ಕಲಿತಷ್ಟು ಇಲ್ಲಿ ಹೊಸದು ಸಿಗುತ್ತಲೇ ಹೋಗುತ್ತದೆ” ಸಂಗೀತ ನಿರ್ದೇಶಕ ಚೇತನ್‌ ರಾವ್‌”. ತಮ್ಮ ಸಂಗೀತದ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಕಂಪೂಸರ್‌ ಚೇತನ್‌ ರಾವ್‌.

ಒಂದು ಸಿನಿಮಾ ಗೆಲ್ಲಬೇಕಾದರೆ, ನಟರ ನಟನೆ ಮಾತ್ರವಷ್ಟೇ ಅಲ್ಲದೆ, ತೆರೆಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಪ್ರಮಾಣದಲ್ಲಿರಬೇಕು. ತೆರೆಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗಿಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ, ಇದೀಗ ಕನ್ನಡದ ಯುವ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಚೇತನ್‌ ರಾವ್‌ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಹೌದು, ಕನ್ನಡಿಗ ಅದರಲ್ಲೂ ಬೆಂಗಳೂರಿಗರಾದ ಚೇತನ್‌ ರಾವ್‌, ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ…