ಟ್ರೇಲರ್ ನಲ್ಲೇ ನಿರೀಕ್ಷೆ ಮೂಡಿಸಿರುವ ಕಿರಣ್ ರಾಜ್ ಅಭಿನಯದ “ಮೇಘ” ಚಿತ್ರ ನವೆಂಬರ್ 29ರಂದು ತೆರೆಗೆ .
ಚರಣ್ ನಿರ್ದೇಶನದ, ಕಿರಣ್ ರಾಜ್ – ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿರುವ ಹಾಗೂ ಕೃಷಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಯತೀಶ್ ಹೆಚ್ ಆರ್ ನಿರ್ಮಿಸಿರುವ ‘ಮೇಘ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತ್ರಿವಿಕ್ರಮ ಸಾಫಲ್ಯ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಟ್ರೇಲರ್ ನಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಮ್ಮ ಕೃಷಿ ಪ್ರೊಡಕ್ಷನ್ಸ್ ನ ಚೊಚ್ಚಲ…