ರಿಷಬ್ ಶೆಟ್ಟಿ ಪ್ರಸ್ತುತಪಡಿಸುವ ಬಹುನಿರೀಕ್ಷಿತ ಬಹುಭಾಷಾ ಕಿರುಚಿತ್ರ ‘MAGICC’ (ಮ್ಯಾಜಿಕ್) ಈಗ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಣೆಗೆ ಲಭ್ಯವಿದೆ
ಹೊಸ ಪ್ರತಿಭೆಗಳ ಬೆನ್ನಲುಬಾಗಿ ನಿಂತ ರಿಷಬ್ ಶೆಟ್ಟಿ!ಯುವ ಹಾಗೂ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ತಮ್ಮ ಪರಂಪರೆಯನ್ನು ಮುಂದುವರಿಸಿರುವ ರಿಷಬ್ ಶೆಟ್ಟಿ, ಈಗ ‘MAGICC’ ಕಿರುಚಿತ್ರದ ಮೂಲಕ ಮತ್ತೊಮ್ಮೆ ಹೊಸ ತಂಡಕ್ಕೆ ಆಸರೆಯಾಗಿದ್ದಾರೆ. ನವನಿರ್ದೇಶಕ ಶಿವಚಿರಂತನ ನಿರ್ದೇಶನದ ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರವು ಶಬ್ದ ಮತ್ತು ಆತ್ಮಾವಲೋಕನದ ಸುತ್ತ ಸಾಗುವ ಅದ್ಭುತ ಕಥಾಹಂದರವನ್ನು ಹೊಂದಿದೆ.“ಸುತ್ತಲಿನ ಸದ್ದು ಅಡಗಿದಾಗ, ಉಳಿಯುವುದೇನು?” ಎಂಬ ಆಳವಾದ ಚಿಂತನೆ…
