ಜೂನ್ 5 ರಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಬಹುಭಾಷಾ ತಾರೆ ಲಕ್ಷ್ಮೀ ಅಭಿನಯದ “ಮಿಥುನಂ” ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆ
ಭಾರತ ದೇಶ ಕಂಡ ಅತ್ಯುತ್ತಮ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅತ್ಯುತ್ತಮ ನಟರೂ ಹೌದು. ಅವರು ಅಭಿನಯಿಸಿದ ಕೊನೆಯ ಚಿತ್ರ “ಮಿಥುನಂ”. ಖ್ಯಾತ ನಿರ್ದೇಶಕ ತನಿಕೆಳ್ಳ ಭರಣಿ ಅವರ ನಿರ್ದೇಶನದ ಈ ತೆಲುಗು ಚಿತ್ರದ ಕನ್ನಡ ಅವತರಣಿಕೆ ಜೂನ್ 5 ರಂದು ಬಿಡುಗಡೆಯಾಗಲಿದೆ. ಜೂನ್ 4 ಎಸ್ ಪಿ ಬಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಹರಿದಾಸರ ಚಿತ್ರಗಳ ನಿರ್ದೇಶಕರೆಂದೆ ಹೆಸರಾಗಿರುವ ಮಧುಸೂದನ್ ಹವಾಲ್ದಾರ್ ಹಾಗೂ ತ್ರಿವಿಕ್ರಮ ಜೋಶಿ ಅವರ ಸಾರಥ್ಯದಲ್ಲಿ…
