ಲೂಸ್ ಮಾದ ಯೋಗಿ ಅಭಿನಯದ 51 ಚಿತ್ರ “ಫಾರೆವರ್”ಗೆ ಅದ್ದೂರಿ ಚಾಲನೆ.
ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಶುಭಕೋರಿದ ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲೂಸ್ ಮಾದ ಯೋಗಿ ಅಭಿನಯದ 51 ನೇ ಚಿತ್ರ “ಫಾರೆವರ್”. ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್(ಠಾಗೋರ್ ಕೃಷ್ಣ) ನಿರ್ಮಾಣದ, “ಚಂದ್ರಿಕ” ಖ್ಯಾತಿಯ ಯೋಗೇಶ್ ಎಂ ನಿರ್ದೇಶಿಸುತ್ತಿರುವ “ಫಾರೆವರ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆರಂಭ ಫಲಕ ತೋರಿದರು. ಶಾಸಕ ಕೃಷ್ಣಪ್ಪ…
