ಮೊದಲನೋಟದಲ್ಲೇ ಮೋಡಿಮಾಡಿದ “ಅಮರ ಪ್ರೇಮಿ ಅರುಣ್” . ಇದು ಬಯಲುಸೀಮೆಯ ಪ್ರೇಮಕಥೆ .
ಕನ್ನಡದಲ್ಲೀಗ ಹೊಸತಂಡದಿಂದ ಹೊಸಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ “ಅಮರ ಪ್ರೇಮಿ ಅರುಣ್” ಸಹ ಒಂದು. ಸಮಾನ ಮನಸ್ಕರೆಲ್ಲಾ ಸೇರಿ ಕಟ್ಟಿರುವ ಒಲವು ಸಿನಿಮಾ ಎಂಬ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಗಿರೀಶ್ ಕಾಸರವಳ್ಳಿ, ಯೋಗರಾಜ್ ಭಟ್ ಸೇರಿದಂತೆ ಕನ್ನಡದ ಅನೇಕ ಹಿರಿಯ ದಿಗ್ದರ್ಶಕರ ಬಳಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಡಾ||ಮಂಜಮ್ಮ ಜೋಗತಿ…