ಕರ್ಣಾಟಬಲಂ ಅಜೇಯಂ” ಚಿತ್ರಕ್ಕಾಗಿಬಾದಾಮಿ ಬೆಟ್ಟದಲ್ಲಿಮೇಳೈಸಿದ ಕಲಾಮೇಳ
ಸಹಸ್ರಾರು ನೃತ್ಯ ಕಲಾವಿದರೊಂದಿಗೆ ಕಲರ್ ಫುಲ್ ಹಾಡಿಗೆ ಹೆಜ್ಜೆ ಹಾಕಿದಧ್ಯಾನ್ ಯೋಗೇಶ್ವರ್. ಶಾಸಕ, ನಟ, ನಿರ್ಮಾಪಕ ಸಿ.ಪಿ ಯೋಗೇಶ್ವರ್ ಅವರ ಮಗ ಧ್ಯಾನ್ ಯೋಗೇಶ್ವರ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ಕರ್ಣಾಟಬಲಂ ಅಜೇಯಂ’ ಚಿತ್ರಕ್ಕೆ ಬಾದಾಮಿಯಲ್ಲಿ ಅದ್ದೂರಿಯಾಗಿ ಹಾಡಿನ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರೀಕರಣ ವೀಕ್ಷಣೆಗೆ ಮಾಧ್ಯಮದವರನ್ನು ಬಾದಾಮಿಗೆ ಆಹ್ವಾನಿಸಿತ್ತು. ಬಾದಾಮಿಯ ಕೋಟೆಯಲ್ಲಿ ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣ ಭರದಿಂದ ಸಾಗಿತ್ತು. ಚಿತ್ರದ ನಾಯಕ ಧ್ಯಾನ್ ಸಹಸ್ರಾರು ಕಲಾವಿದರು ಹಾಗೂ ಸಹ ಕಲಾವಿದರೊಂದಿಗೆ ‘ಬಾದಾಮಿ ಸೀಮೆಯಿದು…
