ಟೈಟಲ್ ಸಾಂಗ್ ನಲ್ಲೇ ಮೋಡಿ ಮಾಡಿದ ‘ರಾನಿ ’. ಕಿರಣ್ ರಾಜ್ ಅಭಿನಯದ ಈ ಚಿತ್ರ ಸೆಪ್ಟೆಂಬರ್ 12 ರಂದು ತೆರೆಗೆ .
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರದ ಟೈಟಲ್ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಚಿತ್ರಲೇಖಕ ಜೆ.ಕೆ.ಭಾರವಿ ಪ್ರಮೋದ್ ಮರವಂತೆ ಬರೆದು, ಸಚಿನ್ ಬಸ್ರೂರ್ ಸಂಗೀತ ನೀಡಿರುವ “ರಾನಿ” ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಗುರುತೇಜ್ ಶೆಟ್ಟಿ ನಿರ್ದೇಶನದ ಹಾಗೂ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರ ಸೆಪ್ಟೆಂಬರ್ 12 ಗುರುವಾರ ಬಿಡುಗಡೆಯಾಗಲಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು…