ಕನ್ನಡದ ಯುವತಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಹೈಡ್ & ಸೀಕ್ ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ .
“ಹೈಡ್ ಅಂಡ್ ಸೀಕ್” ಕಿರುಚಿತ್ರವನ್ನು ಭಾರತದ ಯುವ ನಿರ್ದೇಶಕಿ 20 ವರ್ಷ ವಯಸ್ಸಿನ ಮಿಸ್ ಕರೆನ್ ಕ್ಷಿತಿ ಸುವರ್ಣ ಅವರು ನಿರ್ದೇಶಿಸಿದ್ದಾರೆ. ಇದು ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು ಹೊಂದಿರುವ 10 ನಿಮಿಷಗಳ ಸ್ವತಂತ್ರ ಕಿರುಚಿತ್ರವಾಗಿದೆ. ಇಂದಿನ ಜಗತ್ತಿನಲ್ಲಿ ಇದು ಪ್ರಸ್ತುತವಾದ ವಿಷಯವಾಗಿದೆ ಏಕೆಂದರೆ ನಾವು ಖಿನ್ನತೆ ಮತ್ತು ಸಿಂಜೊಫ್ರೇನಿಯಾ ಕಾಯಿಲೆಯಿಂದ ಕುಟುಂಬ ಹತ್ಯೆಗಳು / ಸಾರ್ವಜನಿಕ, ಸಾಮೂಹಿಕ ಹತ್ಯೆಗಳನ್ನು ನೋಡುತ್ತಿದ್ದೇವೆ. ಕರೆನ್ ಕ್ಷಿತಿ ಸುವರ್ಣ ಅವರು ತಮ್ಮ ಕ್ರಾಫ್ಟ್ ಮತ್ತು ಕಲೆಗಾಗಿ…