ಏಪ್ರಿಲ್ 10 ರಂದು ಜಯರಾಮ್ ಕಾರ್ತಿಕ್(ಜೆ.ಕೆ) ಅಭಿನಯದ “ಕಾಡ” ಚಿತ್ರ ತೆರೆಗೆ .
ಹಿರಿತೆರೆ ಹಾಗೂ ಕಿರುತೆರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಜಯರಾಮ್ ಕಾರ್ತಿಕ್ (ಜೆ.ಕೆ) ನಾಯಕನಾಗಿ ನಟಿಸಿರುವ, ಅಮಿತ್ ಕುಮಾರ್ ಸಕ್ಸೇನ ನಿರ್ಮಾಣದ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್ ನಿರ್ದೇಶಿಸಿರುವ ಸೈಕೊ ಥ್ರಿಲ್ಲರ್ ಜಾನರ್ ನ “ಕಾಡ” ಚಿತ್ರ ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು “ಕಾಡ”, ನನ್ನ ನಿರ್ದೇಶನದ ಮೂರನೇ ಚಿತ್ರ. ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಕಥೆ…
