ಹೊಸವರ್ಷಕ್ಕೆ ಹೊಸದಂದು ವೆಬ್ ಸಿರೀಸ್ “JUST US”ಇದು ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ ಮೊದಲ ವೆಬ್ ಸಿರೀಸ್ .
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್ ಗೆ “Just us” ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್ ನ ಮೊದಲನೇ ಕಂತು ಪ್ರಸಾರವಾಗಲಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಪಿ.ಸಿ.ಶೇಖರ್, ಇಷ್ಟು ದಿನ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನಾನು, ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದೇನೆ. ವಿವೇಕ್ ಹಾಗೂ ಮೇಘ…
