ನವೆಂಬರ್ 20 ರಂದು ಕಿರಣ್ ರಾಜ್ ಅಭಿನಯದ ” ಜಾಕಿ 42″ ರಾಜ್ಯದಾದ್ಯಂತ ಬಿಡುಗಡೆ .
ಹೆಸರಾಂತ ಜಯಣ್ಣ ಫಿಲಂಸ್ ವಿತರಣೆ ಗುರತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ಜಾಕಿ 42” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 20 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಹೆಸರಾಂತ ಜಯಣ್ಣ ಫಿಲಂಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಗೋಲ್ಡನ್ ಗೇಟ್ ಬ್ಯಾನರ್ ನಡಿಯಲ್ಲಿ ಭಾರತಿ ಸತ್ಯ ನಾರಾಯಣ್ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು, ಕುದುರೆ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ” ಜಾಕಿ 42″ ಚಿತ್ರದ ಎರಡು ಹಾಡುಗಳು…
