ಸೆಪ್ಟೆಂಬರ್ 8 ರಂದು ಎ.ವಿ.ರವಿ(ಜಿಮ್ ರವಿ) ಅವರ ಜೀವನ ಚರಿತ್ರೆಯ ಪುಸ್ತಕ “ರವಿ ನೀನು ಆಗಸದಲ್ಲಿ” ಅನಾವರಣ .
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ ಹಾಗೂ ಕರ್ನಾಟಕದ ಪ್ರಮುಖ ಪ್ರಶಸ್ತಿ ಕರ್ನಾಟಕ ಶ್ರೇಷ್ಠ, ಕರ್ನಾಟಕ ಶ್ರೀ ಸೇರಿದಂತೆ ಏಕಲವ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಎ.ವಿ.ರವಿ (ಜಿಮ್ ರವಿ) ಅವರು ದಕ್ಷಿಣ ಭಾರತದ ಹೆಸರಾಂತ…
