ಶಿವಣ್ಣ ಅಭಿನಯದ “ಘೋಸ್ಟ್” . ಸಿನಿಪ್ರಿಯರಿಗೆ ಮನೋರಂಜನೆಯ ಭರ್ಜರಿ ರಸದೌತಣ .

ಶಿವಣ್ಣ ಅಭಿನಯದ “ಘೋಸ್ಟ್” . ಸಿನಿಪ್ರಿಯರಿಗೆ ಮನೋರಂಜನೆಯ ಭರ್ಜರಿ ರಸದೌತಣ .

ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್ ಅಭಿನಯದ ‘ಘೋಸ್ಟ್’ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಕುತೂಹಲ, ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆ ಎಲ್ಲಾ ಕುತೂಹಲ ಮತ್ತು ನಿರೀಕ್ಷೆಗಳು ಹುಸಿಯಾಗದಂತೆ ನಿರ್ದೇಶಕ ಶ್ರೀನಿ ನೋಡಿಕೊಂಡಿದ್ದಾರೆ.‘ಘೋಸ್ಟ್’ ಚಿತ್ರವು ಜೈಲ್‍ವೊಂದರಲ್ಲಿ ನಡೆಯುವ ಕಥೆ ಎಂದು ಶ್ರೀನಿ ಹೇಳಿಕೊಂಡಿದ್ದರು. ಈ ಚಿತ್ರವು ಬರೀ ಜೈಲ್‍ನಲ್ಲಿ ನಡೆಯುವ ಕಥೆಯಷ್ಟೇ ಅಲ್ಲ, ಸೆಂಟ್ರಲ್‍ ಜೈಲ್‍ನ್ನು ಹೈಜಾಕ್‍ ಮಾಡುವ ಕಥೆ. ಯಾಕೆ? ಹೇಗೆ? ಮುಂದೆ ಏನೆಲ್ಲಾ ಆಗುತ್ತದೆ? ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಅದೇ ರೀತಿ, ಡೀಏಜಿಂಗ್‍ ತಂತ್ರಜ್ಞಾನದ ಮೂಲಕ ಶಿವರಾಜಕುಮಾರ್ ಬಹಳ ಯಂಗ್‍…