ಟೀಸರ್ ನಲ್ಲೇ ಮೋಡಿ ಮಾಡಿದ “ಎಲ್ಟು ಮುತ್ತಾ”
ಇದು ಸಾವಿಗೆ ಡೋಲು ಬಡೆಯುವವರ ಜೀವನದಲ್ಲಿ ನಡೆಯುವ ಘಟನೆ ಆಧರಿಸಿದ ಚಿತ್ರ . ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ಬರೆದು ನಿರ್ದೇಶಿಸಿರುವ ಹಾಗೂ ರಾ.ಸೂರ್ಯ – ಶೌರ್ಯ ಪ್ರತಾಪ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಎಲ್ಟು ಮುತ್ತಾ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಶೈಲಜಾ ವಿಜಯ್ ಕಿರಂಗದೂರ್, ಅಕ್ಷಯ್ ಗಂಗಾಧರ್ ಹಾಗೂ ಎಲ್ ವೈ ರಾಜೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟೀಸರ್ ಕುತೂಹಲ ಮೂಡಿಸಿದ್ದು, ಬಿಡುಗಡೆ ಆದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆಯುತ್ತಿದೆ….