ಡಾರ್ಲಿಂಗ್ ಕೃಷ್ಣ ಅಭಿನಯದ “ಶುಗರ್ ಫ್ಯಾಕ್ಟರಿ” ಟ್ರೇಲರ್ ಗೆ ಸಿನಿರಸಿಕರು ಫಿದಾ

ಡಾರ್ಲಿಂಗ್ ಕೃಷ್ಣ ಅಭಿನಯದ “ಶುಗರ್ ಫ್ಯಾಕ್ಟರಿ” ಟ್ರೇಲರ್ ಗೆ ಸಿನಿರಸಿಕರು ಫಿದಾ

ದೀಪಕ್ ಅರಸ್ ನಿರ್ದೇಶನದ ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 24 ರಂದು ತೆರೆಗೆ . ಬಿಡುಗಡೆಗೂ ಮುನ್ನವೇ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರ ಭಾರಿ ಸುದ್ದಿಯಲ್ಲಿದೆ. ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡೆಗಡೆಯಾಗಿರುವ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್ ನಲ್ಲಿ ಮನೋರಂಜನೆಯ ಮಹಾಪೂರವೇ ಹರಿದು ಬಂದಿದೆ. ಎರಡು ನಿಮಿಷಗಳ ಟ್ರೇಲರ್ ನಲ್ಲೇ ಇಷ್ಟು ಮನರಂಜನೆ ಹಾಗೂ ಹಾಸ್ಯಭರಿತ ಸಂಭಾಷಣೆಗಳಿದೆ. ಇನ್ನು ಇಡೀ…