ಉಡುಪಿಯಿಂದ ರಜನಿಕಾಂತ್ ‘ಜೈಲರ್ 2’ವರೆಗೆ ಚೇತನ್ ಡಿಸೋಜಾ ಸಾಹಸ ನಿರ್ದೇಶನದ ಪಯಣ .
ಬಹು ನಿರೀಕ್ಷಿತ “ಜೈಲರ್ 2” ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಈ ಕನ್ನಡದ ಪ್ರತಿಭೆಯದೆ ಸಾಹಸ ನಿರ್ದೇಶನ(ಸಿಂಗಲ್ ಕಾರ್ಡ್) ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಅವರು ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅಕ್ಟೋಬರ್15 ರಂದು ಬಹು ನಿರೀಕ್ಷಿತ ಈ ಚಿತ್ರ ತೆರೆಗೆ ಬರಲಿದ್ದು, ಚಿತ್ರಕ್ಕೆ ಚೇತನ್ ಡಿಸೋಜ ಅವರದ್ದು ಸಿಂಗಲ್ ಕಾರ್ಡ್ ಆಕ್ಷನ್ ಕ್ರೆಡಿಟ್. ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಚೇತನ್ ಅವರೆ ಸಾಹಸ…
