biffes2027

  • ಒಂದು ಉತ್ತಮ ಸಾಕ್ಷ್ಯಚಿತ್ರ ಸಂವಹನ ಆರಂಭಿಸಬೇಕು: ಮಾಯ ಚಂದ್ರ

    ಸಾಕ್ಷ್ಯಚಿತ್ರ ನಿರ್ಮಾಣ ಕುರಿತು ಬೆಳಕು ಚೆಲ್ಲಿದ ಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕಿ ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಒಂದು ಉತ್ತಮ ಸಾಕ್ಷ್ಯಚಿತ್ರ ಸಂವಹನ ಆರಂಭಿಸಬೇಕು. ಸಾಕ್ಷ್ಯಚಿತ್ರ ಕೊನೆಗೊಂಡ ತಕ್ಷಣ ಸಂವಾದ ಆರಂಭವಾಗುವಂತೆ ಮಾಡಬೇಕು. ಸಾಕ್ಷ್ಯಚಿತ್ರವನ್ನು ಅರ್ಥಪೂರ್ಣವಾಗಿ, ಕಥನಪೂರ್ಣವಾಗಿ ಮಾಡಿದಾಗ ಅದು ಜನರಿಗೆ ತಲುಪುತ್ತದೆ’ ಎಂದು ಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕಿ ಮಾಯ ಚಂದ್ರ ಹೇಳಿದರು. ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ನಾಲ್ಕನೇ ದಿನ ನಡೆದ ಸಾಕ್ಷ್ಯಚಿತ್ರ ನಿರ್ಮಾಣದ 12 ನಿಯಮಗಳು ಎಂಬ ಗೋಷ್ಠಿಯಲ್ಲಿ ಅವರು ಸಾಕ್ಷ್ಯಚಿತ್ರ ನಿರ್ದೇಶನ, ಚಿತ್ರೀಕರಣ ಸಿದ್ಧತೆ, ಸಾಕ್ಷ್ಯಚಿತ್ರ…