ಸಂತೋಷ್ ಬಾಲರಾಜ್ ಅಭಿನಯದ ಕೊನೆಯ ಚಿತ್ರ “ಬೆಂಟ್ಲಿ” ಟ್ರೇಲರ್ ಬಿಡುಗಡೆ .
ತಂದೆ ಹಾಗೂ ಸಹೋದರನ ಕನಸಿನ ಕೂಸಿಗೆ ಆಸರೆಯಾದ ಶ್ವೇತ ಬಾಲರಾಜ್ ಕನ್ನಡದ ಸುರದ್ರೂಪಿ ಹಾಗೂ ಪ್ರತಿಭಾವಂತ ನಟ ಸಂತೋಷ್ ಬಾಲರಾಜ್ ಅನಿರೀಕ್ಷಿತ ಸಾವು ಎಲ್ಲರಿಗೂ ತುಂಬಾ ನೋವು ತಂದ ವಿಷಯ. ಸಂತೋಷ್ ಬಾಲರಾಜ್ ಅವರು ನಿಧನರಾಗುವುದಕ್ಕೂ ಮೊದಲು “ಬೆಂಟ್ಲಿ” ಎಂಬ ಚಿತ್ರದಲ್ಲಿ ನಟಿಸಿದ್ದರು ಹಾಗೂ ನಿರ್ದೇಶನವನ್ನು ಮಾಡಿದ್ದರು. ಸಂತೋಷ್ ಬಾಲರಾಜ್ ಅವರ ತಂದೆ ಆನೇಕಲ್ ಬಾಲರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ವಿಪರ್ಯಾಸವೆಂದರೆ ಆನೇಕಲ್ ಬಾಲರಾಜ್ ಹಾಗೂ ಸಂತೋಷ್ ಬಾಲರಾಜ್ ಇಬ್ಬರು ಈಗ ನಿಧನರಾಗಿದ್ದಾರೆ. ಸಹೋದರ…
