ಸರ್ವರ ಮನಸ್ಸಿಗೂ ಹತ್ತಿರವಾಗಲಿದೆ “ಸರ್ವಸ್ವ” ಹಾಡು . ಸೆಪ್ಟೆಂಬರ್ 20 ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಲಭ್ಯ .
ಈ ಹಿಂದೆ “ಲೈಫ್ 360” ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ ನಟಿಸಿ, ನಿರ್ದೇಶಿಸಿರುವ ಹಾಗೂ ರಾಜಶೇಖರ್ ಎಸ್ ನಿರ್ಮಿಸಿರುವ “ಸರ್ವಸ್ವ” ಮ್ಯೂಸಿಕ್ ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಸೋಮಶೇಖರ್, ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್, ಲಹರಿ ವೇಲು ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಆನಂತರ ಹಾಡಿನ ಬಗ್ಗೆ ಅನೇಕರು ಮಾತನಾಡಿದರು. ನಮ್ಮ ತಾಯಿಯವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಾಯಿ ಗಗನ್ ಪ್ರೊಡಕ್ಷನ್ಸ್ ಜೊತೆ ಸೇರಿ…