ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಸ್ಯಾಂಡಲ್ವುಡ್ ಚಿತ್ರ ‘ರಾಮರಸ’ ಯಶಸ್ವಿಯಾಗಿ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಇದೀಗ ಭರದಿಂದ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ.
ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ವಿಶಿಷ್ಟ ಮತ್ತು ಅದ್ಭುತ ಸಿನಿಮಾ ಅನುಭವ ನೀಡಲು ‘ರಾಮರಸ’ ಸಜ್ಜಾಗಿದೆ. ಈಗಾಗಲೇ ಬಲಿಷ್ಠ ತಾರಾಬಳಗವನ್ನು ಹೊಂದಿರುವ ಈ ಚಿತ್ರಕ್ಕೆ ಇದೀಗ ಮತ್ತೊಂದು ದೊಡ್ಡ ಸರ್ಪ್ರೈಸ್ ಸೇರ್ಪಡೆಯಾಗಿದೆ. ಖ್ಯಾತ ಬಿಗ್ ಬಾಸ್ ತಾರೆ ಅನುಷಾ ರೈ ಅವರು ‘ರಾಮರಸ’ ತಂಡವನ್ನು ಸೇರಿಕೊಂಡಿದ್ದಾರೆ. ಅನುಷಾ ರೈ ಪಾತ್ರದ ಬಗ್ಗೆ:‘ರಾಮರಸ’ ಚಿತ್ರದಲ್ಲಿ ಅನುಷಾ ರೈ ಅವರು ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಮೌನವೇ ಮಾತಾಗಿರುವ ಸುಂದರಿ – ಆತ್ಮೀಯ ಜೀವನವನ್ನು ಹೊಂದಿರುವ ಸೌಮ್ಯ ಶಿಕ್ಷಕಿಯಾಗಿ ನಟಿಸುತ್ತಿದ್ದಾರೆ….
