“chef ಚಿದಂಬರ” ಚಿತ್ರದಲ್ಲಿ “ಅನು” ವಾಗಿ ಕಾಣಿಸಿಕೊಳ್ಳಲಿದ್ದಾರೆ “ಲವ್ ಮಾಕ್ಟೇಲ್” ಹುಡುಗಿ ರೆಚೆಲ್ ಡೇವಿಡ್ .
“ಲವ್ ಮಾಕ್ಟೇಲ್” ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ರೆಚೆಲ್ ಡೇವಿಡ್. ರೆಚೆಲ್ ಅವರು ಎಂ.ಆನಂದರಾಜ್ ನಿರ್ದೇಶನದ ಹಾಗೂ ಅನಿರುದ್ದ್ ಜತಕರ್ ನಾಯಕನಾಗಿ ನಟಿಸಿರುವ “chef ಚಿದಂಬರ” ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ “ಅನು” ಎಂಬ ಪಾತ್ರದಲ್ಲಿ ರೆಚೆಲ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ. ರೆಚೆಲ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಇತ್ತೀಚಿಗೆ ಚಿತ್ರತಂಡ ಬಿಡುಗಡೆ ಮಾಡಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ “chef ಚಿದಂಬರ” ಸದ್ಯದಲ್ಲೇ ತೆರೆಯ ಮೇಲೆ ರಾರಾಜಿಸಲಿದ್ದಾನೆ. ಈಗಾಗಲೇ ಪೋಸ್ಟರ್,…