“ದಿ ಸೂಟ್” ಚಿತ್ರದ ವಿಶೇಷ ಪಾತ್ರದಲ್ಲಿ ಸುಜಯ್ ಆರ್ಯ . ವಿಭಿನ್ನ ಕಥೆಯ ಈ ಚಿತ್ರ ಮೇ 17 ರಂದು ತೆರೆಗೆ .
ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ನಿರ್ಮಾಣವಾಗುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ “ದಿ ಸೂಟ್” ಚಿತ್ರ ಮೇ 17 ರಂದು ತೆರೆ ಕಾಣಲಿದೆ. “ಸೂಟ್” ನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸುಜಯ್ ಆರ್ಯ ಅವರು ಅಭಿನಯಿಸಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಸುಜಯ್ ಆರ್ಯ ಅವರು ಈ ಹಿಂದೆ ರಾಮನಾಥ್ ಋಗ್ವೇದಿ ನಿರ್ದೇಶನದ “ಅಧಿಕಾರ” ಚಿತ್ರದಲ್ಲಿ ನಟಿಸಿದ್ದರು. ಸುಜಯ್ ಆರ್ಯ ಅವರನ್ನು ನೋಡಿದವರು ನೀವು ಹೋರೋ ತರ ಕಾಣುತ್ತೀರಾ.. ಸಿನಿಮಾದಲ್ಲಿ ನಟಿಸಿ ಎನ್ನುತ್ತಿದರಂತೆ. “ಅಧಿಕಾರ” ಚಿತ್ರದ ಸುಜಯ್ ಆರ್ಯ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗತ್ತು.
ನಂತರ “ಸೂಟ್” ಚಿತ್ರದ ನಿರ್ದೇಶಕ ಭಗತ್ ರಾಜ್ ಅವರು ಸುಜಯ್ ಆರ್ಯ ಅವರನ್ನು ನೋಡಿ “ಸೂಟ್” ಚಿತ್ರದಲ್ಲಿ ಮುಖ್ಯ ಪಾತ್ರವಿದೆ. ಆದರೆ ಆ ಪಾತ್ರ ನೆಗಟೀವ್ ಶೇಡ್ ನಲ್ಲಿರುತ್ತದೆ. ಆ ಪಾತ್ರದಲ್ಲಿ ನೀವು ನಟಿಸಬೇಕೆಂದರು. ನೆಗಟೀವ್ ಪಾತ್ರವನ್ನು ಮಾಡಲು ನಾನು ಒಪ್ಪಿರಲಿಲ್ಲವಂತೆ. ಆದರೆ ನಟನಿಗೆ ಉತ್ತಮ ಪಾತ್ರ ಮುಖ್ಯ. ಎಂದು ನಿರ್ದೇಶಕರು ಹೇಳಿದಾಗ ಈ ಪಾತ್ರ ಒಪ್ಪಿಕೊಂಡು ನಟಿಸಿದ್ದೇನೆ. ಈಗ ಚಿತ್ರವನ್ನು ನೋಡಿದ್ದೇನೆ. ನನ್ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ ಎನ್ನುತ್ತಾರೆ ಸುಜಯ್ ಆರ್ಯ. ಮುಂದೆ ಕೂಡ ಉತ್ತಮ ಪಾತ್ರಗಳು ಬಂದರೆ ನಟಿಸುವ ಇರಾದೆ ಇದೆ ಎಂದು ಸುಜಯ್ ಆರ್ಯ ತಿಳಿಸಿದ್ದಾರೆ.
ಭಗತ್ ರಾಜ್ ನಿರ್ದೇಶನದ ಈ ಚಿತ್ರವನ್ನು ಬಿ.ರಾಮಸ್ವಾಮಿ ಹಾಗೂ ಮಾಲತಿ ಗೌಡ ನಿರ್ಮಿಸಿದ್ದಾರೆ. ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸೂಟ್ ಈ ಚಿತ್ರದ ನಾಯಕ ಹಾಗೂ ನಾಯಕಿ. ಕಮಲ್, ಸುಜಯ್, ಮಂಜುನಾಥ್ ಪಾಟೀಲ್, ದೀಪ್ತಿ ಕಾಪ್ಸೆ, ಕುಸುಮ ರಾಮಯ್ಯ, ಡಾ||ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್ ಹಾಗೂ ರಂಗಭೂಮಿ ಮತ್ತು ರಾಜಕೀಯದ ಪ್ರಮುಖ ಗಣ್ಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.