ಯುವ ದಸರಾದಲ್ಲಿ ಅದ್ದೂರಿಯಾಗಿ ನೆರವೇರಿತು ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಜೆ . ಸಮಾರಂಭಕ್ಕೂ ಮುನ್ನ ಶ್ರೀಚಾಮುಂಡೇಶ್ವರಿ ದರ್ಶನ ಪಡೆದ ಖ್ಯಾತ ಸಂಗೀತ ನಿರ್ದೇಶಕ .

ಹಲವು ವರ್ಷಗಳಿಂದ ತಮ್ಮ ಅದ್ಭುತ ಸಂಗೀತ ನಿರ್ದೇಶನದ ಮೂಲಕ ಜಗತ್ಪ್ರಸಿದ್ಧರಾಗಿರುವ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಇತ್ತೀಚಿಗೆ ಮೈಸೂರಿನ ಯುವ ದಸರಾದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭ ಅದ್ದೂರಿಯಾಗಿ ನಡೆಯಿತು. ಪ್ರೇಕ್ಷಕರು ಇಳಯರಾಜ ಸಂಗೀತ ಸಂಯೋಜನೆಯ ಹಾಡುಗಳ ಮೋಡಿಗೆ ಮರಳಾದರು.

ಈ ಕಾರ್ಯಕ್ರಮದ ಸಲುವಾಗಿ ಮೈಸೂರಿಗೆ ಆಗಮಿಸಿದ್ದ ಇಳಯರಾಜ ಅವರು ಮೊದಲು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದರ್ಶನ ಪಡೆದರು. ಇಳಯರಾಜ ಅವರ ಆಪ್ತರಾದ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್, ಇಳಯರಾಜ ಅವರು ಮೈಸೂರಿಗೆ ಬಂದು ಹಿಂತಿರುಗುವವರೆಗೂ ಅವರೊಡನೆ ಇದ್ದು ಯಾವುದೇ ತೊಂದರೆ ಆಗದಂತೆ ಸುಲಲಿತವಾಗಿ ಸಮಾರಂಭ ನಡೆಯಲು ಸಹಕಾರಿಯಾದರು‌.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments