ಕನ್ನಡಿಗರ ಮೆಚ್ಚಿನ “ಸಿರಿ ಕನ್ನಡ” ವಾಹಿನಿಗೆ ಏಳನೇ ಹುಟ್ಟುಹಬ್ಬ .iAM ಸಹಯೋಗದೊಂದಿಗೆ ಏಳನೇ ವರ್ಷದಲ್ಲಿ “ಬಂಗಾರದ ಜೋಡಿ” ಸೇರಿದಂತೆ ವಿನೂತನ ಕಾರ್ಯಕ್ರಮಗಳು .

ಪ್ರಸಿದ್ದ ಧಾರಾವಾಹಿಗಳು, ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನ ಮುಟ್ಟಿರುವ “ಸಿರಿ ಕನ್ನಡ” ವಾಹಿನಿ ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆ ಅಡಿಯಿಟ್ಟಿದೆ. ಈ ಸಂದರ್ಭದಲ್ಲಿ iAM ಸಂಸ್ಥೆಯ ಸಹಯೋಗದೊಂದಿಗೆ ವಿನೂತನ‌ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು “ಸಿರಿ ಕನ್ನಡ” ವಾಹಿನಿ‌ ಹಾಕಿಕೊಂಡಿದೆ. ಇದರಲ್ಲಿ ಸತಿಪತಿಗಳಿಗಾಗಿ ನಡೆಸುವ “ಬಂಗಾರದ ಜೋಡಿ” ಪ್ರಮುಖ ಕಾರ್ಯಕ್ರಮವಾಗಿದೆ. ಈ ಕುರಿತು ಮಾಹಿತಿ ನೀಡಲು‌ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಮೊದಲು ಮಾತನಾಡಿದ ಸಿರಿ ಕನ್ನಡ ವಾಹಿನಿಯ ಸಿಇಓ ಸಂಜಯ್ ಶಿಂಧೆ, 2018ರಲ್ಲಿ ಆರಂಭವಾದ ನಮ್ಮ ಸಿರಿ ಕನ್ನಡ ವಾಹಿನಿ ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆಅಡಿಯಿಟ್ಟಿದೆ. ಈ ಸಂದರ್ಭದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹೆಸರಾಂತ IAM ಸಂಸ್ಥೆ ನಮ್ಮ ಜೊತೆಗೂಡಿದೆ. ಕನ್ನಡದ ಐದು ಮನೋರಂಜನಾ ವಾಹಿನಿಗಳಲ್ಲಿ ನಮ್ಮ ಸಿರಿ ಕನ್ನಡವೂ ಕೂಡ ಒಂದು. ಇದು ನಮ್ಮ ಹೆಮ್ಮೆ. ಬರೀ ಬೆಂಗಳೂರಿಗೆ ಕಾರ್ಯಕ್ರಮಗಳನ್ನು ಸೀಮಿತ ಮಾಡದೆ, ರಾಜ್ಯಾದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆಸುವ ಯೋಜನೆ ಇದೆ. ಇದರ ಮೊದಲ ಹೆಜ್ಜೆಯಾಗಿ ದಾವಣಗೆರೆಯಲ್ಲಿ ಡಿಸೆಂಬರ್ 14 ರಿಂದ “ಬಂಗಾರದ ಜೋಡಿ” ಎಂಬ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ.‌ ದಾವಣಗೆರೆ ಸೇರಿದಂತೆ ಹನ್ನೆರಡು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಆಡುವರಿಗಷ್ಟೇ ಅಲ್ಲ. ನೋಡುವವರಿಗೂ ವಿಶೇಷ ಬಹುಮಾನಗಳನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. 24 ದಿನಗಳಲ್ಲಿ 48 ಕಾರ್ಯಕ್ರಮಗಳ, 12 ಮೇಘಾ ಇವೆಂಟ್ ಗಳ ಮೂಲಕ 25 ಲಕ್ಷ ಜನರನ್ನು 10 ಬಾರಿ ಸಂಪರ್ಕಿಸುವ ಅಭಿಯಾನ ಹಾಕಿಕೊಂಡಿದೆ. ಕಾರ್ಯಕ್ರಮಗಳಲ್ಲಿ ಭಾಗಿಯಾಗುವ 50000 ಜನರಿಗೆ ಒಂದು ಕೋಟಿಯ ತನಕ ಬಹುಮಾನ ಹಾಗೂ ಕಾರ್ಯಕ್ರಮ ವೀಕ್ಷಿಸುವ ಸುಮಾರು 3ಲಕ್ಷ ಜನರಿಗೆ ಹತ್ತು ಕೋಟಿಯ ತನಕ ಬಹುಮಾನ ನೀಡಲಾಗುವುದು.ಕಾರು, ರೇಷ್ಮೇ ಸೀರೆ, ಚಿನ್ನದ ನಾಣ್ಯಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಅನೇಕ ಬಹುಮಾನಗಳಿರುತ್ತದೆ. ನಮ್ಮ‌ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು.

ನಮ್ಮ ಐ ಎ ಎಂ ಸಂಸ್ಥೆ ಈವರೆಗೆ ಸಾಕಷ್ಟು ವಾಹಿನಿಗಳ ಜೊತೆಗೆ ಕೈ ಜೋಡಿಸಿದೆ. ಈಗ ನಮ್ಮ IAM ಹಾಗೂ ಸಿರಿಕನ್ನಡ ವಾಹಿನಿ ಸಹಯೋಗದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಹಲಾವರು ಕಾರ್ಯಕ್ರಮಗಳು ಬರುತ್ತಿದೆ. ಅದರ ಮೊದಲ ಪ್ರಯತ್ನವಾಗಿ “ಬಂಗಾರದ ಜೋಡಿ” ಕಾರ್ಯಕ್ರಮ ದಾವಣಗೆರೆಯಲ್ಲಿ ಆರಂಭವಾಗಲಿದೆ. ಇದೊಂದೆ ಅಲ್ಲ ಜನರಿಗೆ ಅನುಕೂಲವಾಗುವ ಸಾಕಷ್ಟು ಕಾರ್ಯಕ್ರಮಗಳ ಮೂಲಕ ನಾವು ಬರೀ ರಾಜ್ಯವಲ್ಲ, ದೇಶದ ಜನತೆಯನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ‌. ನನಗೆ ತಿಳಿದ ಹಾಗೆ ನೋಡುಗರಿಗೆ ಹತ್ತು ಕೋಟಿ ತನಕ ಬಹುಮಾನ ಘೋಷಿಸಿರುವ ವಾಹಿನಿ ಎಂದರೆ ಇದೇ ಮೊದಲು. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು IAM ಸಂಸ್ಥೆ ಮುಖ್ಯಸ್ಥ ಮಧುಸೂದನ್ ತಿಳಿಸಿದರು.

ಸಿರಿಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ, “ಬಂಗಾರದ ಜೋಡಿ” ಕಾರ್ಯಕ್ರಮ ನಡೆಸಿಕೊಡುವ ಮುರಳಿ ಹಾಗೂ ಚಂದನ, ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಿಕೊಡುವ ಲಕ್ಷ್ಮೀ ಶ್ರೀನಿವಾಸ್ ಗುರೂಜಿ, ನಾರಿಗೊಂದು ಸೀರೆ ಕಾರ್ಯಕ್ರಮ ನಡೆಸಿಕೊಡುವ ರಜನಿ, ಹಾಸ್ಯ ದರ್ಬಾರ್ ಕಾರ್ಯಕ್ರಮ ನಡೆಸಿಕೊಡುವ ದಯಾನಂದ್ ಹಾಗೂ ಪ್ರಾಯೋಜಕರ ಪರವಾಗಿ ವಿಠಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments