ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಪಾಸ್” ಚಿತ್ರದ ಟೀಸರ್.

ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಟೀಸರ್ A2 music ಮೂಲಕ ಬಿಡುಗಡೆಯಾಗಿ,‌ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಜನಮನಸೂರೆಗೊಳ್ಳುತ್ತಿದೆ. ಈ ವಿಷಯವನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.

ನಾನು ನಮ್ಮ‌ಊರಿನ ಜಾತ್ರೆಗೆ ಹೋಗಿದಾಗ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ ಮೈಸೂರಿನಲ್ಲಿ ನಿರ್ಮಾಪಕ ಶಶಿಧರ್ ಇದ್ದಾರೆ. ಅವರು ಚಿತ್ರ ನಿರ್ಮಾಣ ಮಾಡಲು ಹೊರಟಿದ್ದಾರೆ. ಕಥೆ ಹೇಳಬೇಕು ಬಾ ಎಂದರು. ನಾನು ಶಶಿಧರ್ ಹಾಗೂ ಅವರ ಸಹೋದರ ಶ್ರೀಧರ್ ಅವರಿಗೆ ಕಥೆ ಹೇಳಿದ್ದೆ. ಮೆಚ್ಚಿ ನಿರ್ಮಾಣ ಆರಂಭಿಸಿದ್ದರು. ಹೆಚ್ಚು ಅಂಕ ತೆಗೆದವರಿಗೆ ಕಾಲೇಜು ಇರುವಂತೆ. ಇದು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗಾಗಿಯೇ ಸ್ಥಾಪಿತವಾದ ಕಾಲೇಜು. ಕಾಲೇಜಿನಲ್ಲೇ ಹೆಚ್ಚು ಚಿತ್ರೀಕರಣ ನಡೆಯುತ್ತದೆ. ಬಹು ದೊಡ್ಡ ತಾರಾಬಳಗ ಹಾಗೂ ತಾಂತ್ರಿಕವರ್ಗ ನಮ್ಮ ಚಿತ್ರದಲ್ಲಿದೆ. ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ ಎಂದು ನಿರ್ದೇಶಕ ಕೆ.ಎಂ.ರಘು ತಿಳಿಸಿದರು.

ನಟನಾಗಬೇಕೆಂಬ ಆಸೆಹೊತ್ತು ಬೆಂಗಳೂರಿಗೆ ಬಂದವನು ನಾನು ಎಂದು ಮಾತನಾಡಿದ ನಿರ್ಮಾಪಕ ಕೆ.ವಿ.ಶಶಿಧರ್, ನನಗೆ ಯಾವ ಚಿತ್ರದಲ್ಲೂ ನಟಿಸಲು ಅವಕಾಶ ಸಿಗಲಿಲ್ಲ. ಆನಂತರ ಬೇರೆ ಉದ್ಯಮ ಆರಂಭಿಸಿದೆ. ಈಗ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬಂದಿದ್ದೇನೆ.‌ ಸಾಕಷ್ಟು ಹೊಸ ಪ್ರತಿಭೆಗಳಿಗೆ ನಮ್ಮ ಚಿತ್ರದಲ್ಲಿ ಅವಕಾಶ ನೀಡಿದ್ದೇವೆ. ಜನವರಿ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಅರ್ಜುನ ನನ್ನ ಪಾತ್ರದ ಹೆಸರು. “ಜಸ್ಟ್ ಪಾಸ್” ವಿದ್ಯಾರ್ಥಿ ಎಂದು ನಾಯಕ ಶ್ರೀ ತಮ್ಮ ಪಾತ್ರದ ಬಗ್ಗೆ ಹೇಳಿದರು.

ತಾವು ಮೊದಲ ಬಾರಿಗೆ ಪ್ರಾಂಶುಪಾಲರ ಪಾತ್ರ ಮಾಡಿರುವುದಾಗಿ ಹಿರಿಯ ನಟ ರಂಗಾಯಣ ರಘು ತಿಳಿಸಿದರು.

ಚಿತ್ರದ ನಾಯಕಿ ಪ್ರಣತಿ, ನಟ ಗೋವಿಂದೇ ಗೌಡ ಮುಂತಾದ ಕಲಾವಿದರು, ನಿರ್ಮಾಪಕರ ಸಹೋದರ ಕೆ.ವಿ.ಶ್ರೀಧರ್, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ನಿರ್ದೇಶಕರೊಂದಿಗೆ ಸಂಭಾಷಣೆ ಬರೆಯಲು ಜೊತೆಯಾಗಿರುವ ರಘು ನಿಡುವಳ್ಳಿ ಹಾಗೂ ಛಾಯಾಗ್ರಾಹಕ ಸುಜಯ್ ಕುಮಾರ್ “ಜಸ್ಟ್ ಪಾಸ್” ಚಿತ್ರದ ಕುರಿತು ಮಾತನಾಡಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments