ಸ್ಯಾಂಡಲ್ವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ರಾಜ್ಯಗಳ ಚಿತ್ರರಂಗದವರಿಗೆ ಪ್ರಿಯವಾಗಲಿದೆ “ಜಾಲಿವುಡ್”
ಸ್ಯಾಂಡಲ್ವುಡ್, ಬಾಲಿವುಡ್ , ಮಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ರಾಜ್ಯಗಳ ಚಿತ್ರರಂಗವರು ಚಿತ್ರಿಕರಣ ನಡೆಸಲು ಅದ್ಭುತವಾದ ಲೊಕೇಶನ್ ಬಿಡದಿ ಬಳಿ ನಿರ್ಮಾಣವಾಗಿದೆ. ಅದೇ “ಜಾಲಿವುಡ್”.
ಈ ಹಿಂದೆ ಇನ್ನೋವೇಟೀವ್ ಫಿಲ್ಮ್ ಸಿಟಿ ಎಂದು ಗುರುತಿಸಿಕೊಂಡಿದ್ದ ಜಾಗವನ್ನು ಉದ್ಯಮಿ ಐಸಿರಿ ಗಣೇಶ್ ವಹಿಸಿಕೊಂಡು “ಜಾಲಿವುಡ್” ಹೆಸರಲ್ಲಿ ಮರು ನಾಮಕರಣ ಮಾಡಿದ್ದಾರೆ. ಹಲವು ವಿಶೇಷಗಳಿಂದ ಕೂಡಿರುವ “ಜಾಲಿವುಡ್” ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ.
ಚಿತ್ರೀಕರಣಕಷ್ಟೇ ಅಲ್ಲ. “ಜಾಲಿವುಡ್”, ಬಿಡುವಿನ ಸಮಯ ಕಳೆಯಲು ಬಯಸುವ ಮಂದಿಗೆ ಸೂಕ್ತ ಸ್ಥಳ, ಆಟ, ಊಟ ಮನರಂಜನೆ ಸೇರಿದಂತೆ ಹತ್ತು ಹಲವು ಕ್ರೀಡೆಗಳು ಜನರನ್ನು ಕೈ ಬೀಸಿ ಕರೆಯುತ್ತಿದೆ. ಜೊತೆಗೆ ಮಿನಿ ಗೋವಾ ನಿರ್ಮಾಣ ಮಾಡಿದ್ದು ಗೋವಾಕ್ಕೆ ಹೋದರೆ ಜನರಿಗೆ ಯಾವ ಅನುಭವ ಸಿಗುತ್ತದೆಯೋ ಅದನ್ನು ಜಾಲಿವುಡ್ ನಲ್ಲಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ ಎಂದು ಜಾಲಿವುಡ್ ಕಮರ್ಷಿಯಲ್ ಪಾರ್ಟನರ್ ನವರಸನ್ ಮಾಹಿತಿ ಹಂಚಿಕೊಂಡರು.
” ಜಾಲಿವುಡ್” ಕಳೆದ ತಿಂಗಳು ಅದ್ದೂರಿಯಾಗಿ ಉದ್ಘಾಟನೆಯಾಗಿತ್ತು. ಈಗ ಪ್ರತಿನಿತ್ಯ 700 ರಿಂದ 800 ಮಂದಿ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ಸಾವಿರ ಗಡಿ ದಾಟಲಿದೆ. ವಯಸ್ಕರಿಗೆ 999ರೂ, ಮಕ್ಕಳಿಗೆ 699 ಹಾಗು ಹಿರಿಯ ನಾಗರಿಕರಿಗೆ 599 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ. ಅಕ್ಟೋಬರ್ 15 ರ ತನಕ ಊಟವನ್ನು ಉಚಿತವಾಗಿ ನೀಡಲಾಗುವುದು. ಈಗಾಗಲೇ ಹಲವು ಕ್ರೀಡಾ ಚಟುವಟಿಕೆಗಳು ಅರಂಭವಾಗಿವೆ ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಕ್ರೀಡೆಗಳು ಪ್ರಾರಂಭವಾಗಲಿದೆ.
“ಜಾಲಿವುಡ್” ನಲ್ಲಿ ಚಿತ್ರೀಕರಣ, ಪೋಟೋ ಶೂಟ್, ಕಾರ್ಪರೇಟ್ ಕಂಪನಿಯ ಪ್ರೋಗ್ರಾಮ್ ಗಳು, ಟಿವಿ ವಾಹಿನಿಯ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಬೃಹತ್ ಹಾಲ್ ಗಳಿವೆ. ಸರಿ ಸುಮಾರು 2 ,500 ಜನರ ಸಾಮರ್ಥ್ಯದ ವೇದಿಕೆ ಸೇರಿದಂತೆ ಹಲವು ಸೌಲಭ್ಯಗಳಿವೆ.
“ಜಾಲಿವುಡ್” ಗೆ ಬಂದವರು ದಿನ ಪೂರ ಮಕ್ಕಳು, ಕುಟುಂಬದೊಂದಿಗೆ ಕಾಲಕಳೆದು ಎಂಜಾಯ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಮನರಂಜನಾ ಪಾರ್ಕ್ ಎಲ್ಲರಿಗೂ ಇಷ್ಟವಾಗಲಿದೆ .ಅದಕ್ಕಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು “ಜಾಲಿವುಡ್” ಜನರಲ್ ಮ್ಯಾನೇಜರ್ ಬಷೀರ್ ತಿಳಿಸಿದರು.