“ಜಾಕಿ 42” ಚಿತ್ರದ ಮೂಲಕ ಮತ್ತೆ ಒಂದಾದ ಗುರುತೇಜ್ ಶೆಟ್ಟಿ ಹಾಗೂ ಕಿರಣ್ ರಾಜ್

“ರಾನಿ” ಚಿತ್ರದ ಮುಖಾಂತರ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಗುರುತೇಜ್ ಶೆಟ್ಟಿ ಹಾಗೂ ನಟ ಕಿರಣ್ ರಾಜ್ ಮತ್ತೆ ಒಂದ್ದಾಗಿದ್ದಾರೆ, “ರಾನಿ” ಯಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ ಕಿರಣ್ ರಾಜ್ ಈಗ ಕುದುರೆ ಏರಿ “ಜಾಕಿ” ಯಾಗಿದ್ದಾರೆ ರಾನಿ ಯಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಇಲ್ಲೂ ಕೆಲಸ ಮಾಡುತ್ತಿದೆ,ರಾಗವೇಂದ್ರ ಬಿ ಕೋಲಾರ ಛಾಯಾಗ್ರಹಣ ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್ ಬಿ ಸಂಕಲನ ಚಿತ್ರಕ್ಕಿದೆ.

ಗೋಲ್ಡನ್ ಗೇಟ್ ಸ್ಟುಡಿಯೋಸ್” ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ‌ “ಜಾಕಿ 4” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಕಮರ್ಷಿಯಲ್ ಚಿತ್ರವಾಗಿದ್ದು ಹಾರ್ಸ್ ರೇಸ್ ಹಿನ್ನೆಲೆ ಯಲ್ಲಿ ಕಥೆ ಸಾಗಲಿದೆ. ಚಿತ್ರ ಕಥೆಯಲ್ಲಿ ಲವ್ ಫ್ಯಾಮಿಲಿ ಸೆಂಟಿಮೆಂಟ್ ಹಾಸ್ಯ ಎಲ್ಲವೂ ಒಳಗೊಂಡಿದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ..ಮೇ 15 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಬೆಂಗಳೂರು , ಮೈಸೂರು ವಿದೇಶದಲ್ಲೂ ಚಿತ್ರೀಕರಣ ನೆಡೆಯಲಿದೆ..ಚಿತ್ರದ ಟೈಟಲ್ ಬಿಡುಗಡೆ ಗೊಳಿಸಿದ ಚಿತ್ರ ತಂಡ ಟೈಟಲ್ ಪೋಸ್ಟರ್ ನಲ್ಲಿ ಪ್ರೇಕ್ಷಕನ ಗಮನ ಸೆಳೆದಿದೆ,ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಪೋಸ್ಟರ್ ಇದ್ದು ಹಾರ್ಸ್ ಮೇಲೆ ಜಾಕಿ ಹಾಗೂ ಹಾರ್ಸ್ ಕಾಲ್ ಕೆಳಗೆ ಹಣದ ರೋಲ್ jockey 42 ಎನ್ನುವ ಟೈಟಲ್ ಗಮನ ಸೆಳೆದಿದೆ,ಉಳಿದ ತಾರಾಗಣ ಹಾಗೂ ತಂತ್ರಜ್ಞರ ಮಾಹಿತಿ ಇನ್ನಸ್ಟೇ ಚಿತ್ರ ತಂಡದಿಂದ ಬರಬೇಕಿದೆ.

Similar Posts

5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments