ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಯಿತು ನಾಯಕಿ ಎಸ್ತರ್ ನರೋನ್ಹ ಅವರ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ .
ಕಳೆದ ಹತ್ತು ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿರುವ ನಾಯಕಿ ಎಸ್ತರ್ ನರೋನ್ಹ, ಗಾಯಕಿಯಾಗೂ ಜನಪ್ರಿಯ. ಈಗ ಎಸ್ತರ್ ನರೋನ್ಹ ಹೊಸ ಹೆಜ್ಜೆ ಇಟ್ಟಿದ್ದಾರೆ.
ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ ಆರಂಭಿಸಿದ್ದಾರೆ. ಇತ್ತೀಚೆಗೆ ಇದರ ಉದ್ಘಾಟನೆ ಅದ್ದೂರಿಯಾಗಿ ನೆರವೇರಿತು. ಈ ಸಲೂನ್ ಬಗ್ಗೆ ಎಸ್ತರ್ ನರೋನ್ಹ ಮಾಹಿತಿ ನೀಡಿದ್ದಾರೆ.
ನಾಯಕಿಯಾಗಿ ಹಾಗೂ ಗಾಯಕಿಯಾಗಿ ನಾನು ನಿಮಗೆ ಚಿರಪರಿಚಿತ. ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ನಾನು ಈಗ ಸಿನಿಮಾ ಹೊರತು ಪಡಿಸಿ ಮತ್ತೊಂದು ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದೀನಿ. ಹೆಚ್ ಎಸ್ ಆರ್ ಲೇಔಟ್ ನಲ್ಲಿ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ ಆರಂಭಿಸಿದ್ದೇನೆ. ಇದರ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬಹುದು.”FRIMOUSSE”, ಎಂದರೆ ಫ್ರೆಂಚ್ ಭಾಷೆಯಲ್ಲಿ ಮುದ್ದುಮುಖ ಎಂದು ಅರ್ಥ.
ಮಹಿಳೆಯರಿಗೆ ವಯೋಮಾನ ಹಾಗೂ ಹಾರ್ಮೋನ್ ವ್ಯತ್ಯಾಸದಿಂದ ತ್ವಚ್ಚೆ ಕೂದಲು ಹಾಗೂ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲರಿಗೂ ಒಂದೇ ತರಹದ ಬ್ಯೂಟಿ ಪ್ರಾಡಕ್ಟ್ಸ್ ಹಾಗೂ ಒಂದೇ ತರಹದ ಟ್ರೀಟ್ ಮೆಂಟ್ ನೀಡುತ್ತಾರೆ. ಆದರೆ ನಮ್ಮ “FRIMOUSSE” ನಲ್ಲಿ ಮಹಿಳೆಯರಿಗೆ ಅವರ ವಯೋಮಾನಕ್ಕೆ ಹಾಗೂ ಅವರ ಅವಶ್ಯಕತೆಗೆ ತಕ್ಕ ಹಾಗೆ ಸ್ಕಿನ್ ಕೇರ್, ಹೇರ್ ಕೇರ್ ಹಾಗೂ ಮೇಕಪ್ ಗಳನ್ನು ಮಾಡುತ್ತೇವೆ. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕಿ ಎಸ್ತರ್ ನರೋನ್ಹ.