“BAD” ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು” . ಅರ್ಜುನ್ ಜನ್ಯ ಸಂಗೀತ ನೀಡಿ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಹಾಡು ಫೆಬ್ರವರಿ 5 ರಂದು ಬಿಡುಗಡೆ .”BAD” ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು” .
ಪಿ.ಸಿ.ಶೇಖರ್ ನಿರ್ದೇಶನದ,
ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “BAD” ಚಿತ್ರ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಟೀಸರ್ ಹಾಗೂ ಟ್ರೇಲರ್ ಮೂಲಕ “BAD” ಈಗಾಗಲೇ ಎಲ್ಲರ ಮನ ಗೆದ್ದಿದೆ. ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಭಿನ್ನವಾಗಿ ಹಾಡೊಂದನ್ನು ಸಂಯೋಜಿಸಿದ್ದಾರೆ. ನಿಶಾನ್ ರೈ ಬರೆದು ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಇಂಗ್ಲೀಷ್ ಹಾಡಿನ ಲಿರಿಕಲ್ ವಿಡಿಯೋ ಫೆಬ್ರವರಿ 5 ರಂದು ಬಿಡುಗಡೆಯಾಗುತ್ತಿದೆ.
“ನಾನು ಚಿತ್ರದ ಸನ್ನಿವೇಶವೊಂದನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ವಿವರಿಸಿ, ಈ ಸನ್ನಿವೇಶಕ್ಕೆ ಒಂದು ಹಾಡು ಬೇಕು ಎಂದು ಕೇಳಿದೆ. ಅವರು ಮೊದಲು ನೀವು ಚಿತ್ರೀಕರಣ ಮಾಡಿಕೊಂಡು ಬನ್ನಿ. ಆಮೇಲೆ ಸನ್ನಿವೇಶಕ್ಕೆ ತಕ್ಕ ಹಾಗೆ ಹಾಡನ್ನು ಸಂಯೋಜಿಸುತ್ತೇನೆ ಎಂದರು. ಆನಂತರ ನಿಶಾನ್ ರೈ ಬರೆದಿರುವ “ರೈಸ್ ಫ್ರಮ್ ದ ಮೂನ್” ಎಂಬ ಇಂಗ್ಲೀಷ್ ಹಾಡಿಗೆ ಸಂಗೀತ ಸಂಯೋಜಿಸಿದರು. ಈ ಹಾಡಿನಲ್ಲಿ ಚಿತ್ರದ ಕಥೆಯಿದೆ. ನಾವು ಈ ಸನ್ನಿವೇಶಕ್ಕೆ ಕನ್ನಡ ಹಾಡನ್ನು ಬಳಸಿಕೊಂಡಿದ್ದರೆ. ಜನರು ಹಾಡನ್ನು ಎಂಜಾಯ್ ಮಾಡುತ್ತಿದ್ದರು. ಕಥೆಯ ಕಡೆ ಗಮನ ಕೊಡುತ್ತಿರಲಿಲ್ಲ. ಹಾಗಾಗಿ ಹಾಡು ಇಷ್ಟವಾಗಬೇಕು ಹಾಗೂ ಚಿತ್ರದ ಕಥೆಯೂ ಗೊತ್ತಾಗಬೇಕು ಅದಕ್ಕಾಗಿ ಇಂಗ್ಲಿಷ್ ಭಾಷೆಯ ಹಾಡನ್ನೇ ಬಳಸಿಕೊಳ್ಳಲಾಗಿದೆ. ಇನ್ನು ಈ ಹಾಡು ಬ್ಲ್ಯಾಕ್ & ವೈಟ್ ನಲ್ಲಿ ಮೂಡಿಬಂದಿದೆ. ಸಿನಿಮಾ ರಾ ಕಂಟೆಂಟ್ ನಲ್ಲಿ ಇರುವುದರಿಂದ ಈ ಹಾಡು ಬ್ಲ್ಯಾಕ್ & ವೈಟ್ ನಲ್ಲಿ ಮೂಡಿ ಬಂದರೆ ಹೆಚ್ಚು ಸೂಕ್ತವೆನಿಸಿತು. ಅರ್ಜುನ್ ಜನ್ಯ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಪ್ರಮೋಶನ್ ಗಾಗಿ ಬಳಸಿಕೊಳ್ಳಲಾಗುತ್ತಿರುವ ಈ ವಿಡಿಯೋ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 5 ರಂದು ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದ ಪ್ರಚಾರಕ್ಕಾಗಿ ಈ ವಿಡಿಯೋ ಸಾಂಗ್ ಬಳಸಿಕೊಳ್ಳಲಾಗುವುದು. ಆದರೆ ಮೂಲ ಗೀತೆ ಚಿತ್ರದಲ್ಲೂ ಇರುತ್ತದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹಾಡಿನ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ “BAD” ಚಿತ್ರಕ್ಕೆ ಪಿ.ಸಿ.ಶೇಖರ್ ಸಂಕಲನ, ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಸಚಿನ್ ಜಡೇಶ್ವರ ಎಸ್ ಬಿ ಸಂಭಾಷಣೆ ಬರೆದಿದ್ದಾರೆ.
“ಪ್ರೀತಿಯ ರಾಯಭಾರಿ” ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ “BAD” ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.