ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ನಿರ್ದೇಶಕ ಹಾಗೂ ನಟ ದ್ವಾರಕೀಶ್ ಅವರ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ತೀವ್ರ ಸಂತಾಪ .
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ನಿರ್ದೇಶಕ ಹಾಗೂ ನಟ ದ್ವಾರಕೀಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ದ್ವಾರಕೀಶ್ ಚಿತ್ರದಿಂದ ನಿರ್ಮಾಣವಾಗಿರುವ ಅನೇಕ ಚಿತ್ರಗಳಿಗೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ಪಿ ಆರ್ ಓ ಕೆಲಸ ಮಾಡಿದ್ದೆ. ರಾಘವೇಂದ್ರ ಚಿತ್ರವಾಣಿ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರ ಮೇಲೆ ದ್ವಾರಕೀಶ್ ಅವರಿಗೆ ಹೆಚ್ಚು ಪ್ರೀತಿ. ಅದೇ ಪ್ರೀತಿ ಅವರ ಕುಟುಂಬದವರ ಮೇಲೂ ಇತ್ತು. ಮನೆಯ ಎಲ್ಲಾ ಸಮಾರಂಭಗಳಿಗೂ ದ್ವಾರಕೀಶ್ ಅವರು ಕುಟುಂಬ ಸಮೇತ ಬಂದು ಭಾಗಿಯಾಗುತ್ತಿದ್ದರು. ಇಂದು ಅವರ ನಿಧನದ ಸುದ್ದಿ ತಿಳಿದು ತೀವ್ರ ಬೇಸರವಾಯಿತು. ದ್ವಾರಕೀಶ್ ಅವರಿಗೆ ಭಗವಂತ ಸದ್ಗತಿ ನೀಡಲಿ ಎಂದು ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ಪ್ರಾರ್ಥಿಸುತ್ತದೆ.