‘ದೈಜಿ’ ಡಾ.ರಮೇಶ್ ಅರವಿಂದ್ ಅವರ 106 ನೇ ಚಿತ್ರ.

‘ದೈಜಿ’ ಮುಂಬರುವ ಥ್ರಿಲ್ಲರ್-ಹಾರರ್ ಚಿತ್ರವಾಗಿದ್ದು, ಡಾ. ರಮೇಶ್ ಅರವಿಂದ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಮತ್ತು ಇದನ್ನು ಆಕಾಶ್ ಶ್ರೀವತ್ಸರವರು ನಿರ್ದೇಶಿಸಲಿದ್ದಾರೆ. ವಿಭಾ ಕಶ್ಯಪ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ಈ ಚಿತ್ರವು ಡಾ.ರಮೇಶ್ ಅರವಿಂದ್ ಅವರ 106 ನೇ ಚಿತ್ರವಾಗಿದ್ದು, ಈ ಹಿಂದೆ ಶಿವಾಜಿ ಸುರತ್ಕಲ್ 1 ಮತ್ತು 2  ಸಿನಿಮಾಗಳನ್ನು ನಿರ್ದೇಶಸಿದ್ದ ನಿರ್ದೇಶಕ ಆಕಾಶ್ ಶ್ರೀವತ್ಸರವರು ಮೂರನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ.

ದೈಜಿಯು ಹಾರರ್-ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಡಾ.ರಮೇಶ್ ಅರವಿಂದ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರತಂಡ ಶೀಘ್ರದಲ್ಲೇ ವಿದೇಶದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಡಾ.ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments