ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಚಿತ್ರ ಎನ್ನುತ್ತಾರೆ ನಾಯಕಿ ಚಾಂದಿನಿ .ಚಿತ್ರ ರೀ ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ನೆನಪುಗಳನ್ನು ಹಂಚಿಕೊಂಡ ನಟಿ .
ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A”. ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. 2024 ರ ಮೇ 17 ರಂದು “A” ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಾಯಕಿ ಚಾಂದನಿ ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದು ನಾಯಕಿ ಚಾಂದಿನಿ ಜೀವನವೆನ್ನೇ ಬದಲಿಸಿದ ಒಂದು ಸಿನಿಮಾ. ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಅಂದರೆ ತಪ್ಪಾಗಲಾರದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಅಂತ…