ಕನ್ನಡಕ್ಕೆ ವಿಧು ವಿನೋದ್ ಚೋಪ್ರಾ ನಿರ್ದೇಶನದ ’12th ಫೇಲ್’ ಚಿತ್ರಕೆ ಆರ್ ಜಿ ಸ್ಟುಡಿಯೋಸ್ನಿಂದ ಕರ್ನಾಟಕದಲ್ಲಿ ವಿತರಣೆ; ಅ.27ಕ್ಕೆ ಬಿಡುಗಡೆ
ಕರ್ನಾಟಕದ ಜನತೆಗೆ ಗುಣಮಟ್ಟದ ಚಿತ್ರಗಳನ್ನು ತಲುಪಿಸುವ ನಿಟ್ಟಿನಲ್ಲಿ ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್ ಯಾವತ್ತೂ ಮುಂಚೂಣಿಯಲ್ಲಿದ್ದು, ಈ ಸಂಬಂಧ ಹೊಸ ಹೆಜ್ಜೆ ಇಟ್ಟಿದೆ. ‘ಪರಿಂದಾ’, ‘1942 ಎ ಲವ್ ಸ್ಟೋರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ‘ಮುನ್ನಾಭಾಯ್’ ಸರಣಿಯ ನಿರ್ಮಾಪಕರಾದ ಬಾಲಿವುಡ್ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರೊಂದಿಗೆ ಇದೀಗ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಒಡೆತನದ ಕೆ ಆರ್…