ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಪಾಸ್” ಚಿತ್ರದ ಟೀಸರ್.

ಜನಮನಸೂರೆಗೊಳ್ಳುತ್ತಿದೆ “ಜಸ್ಟ್ ಪಾಸ್” ಚಿತ್ರದ ಟೀಸರ್.

ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಟೀಸರ್ A2 music ಮೂಲಕ ಬಿಡುಗಡೆಯಾಗಿ,‌ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.ಜನಮನಸೂರೆಗೊಳ್ಳುತ್ತಿದೆ. ಈ ವಿಷಯವನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ನಾನು ನಮ್ಮ‌ಊರಿನ ಜಾತ್ರೆಗೆ ಹೋಗಿದಾಗ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ ಮೈಸೂರಿನಲ್ಲಿ ನಿರ್ಮಾಪಕ ಶಶಿಧರ್ ಇದ್ದಾರೆ. ಅವರು ಚಿತ್ರ ನಿರ್ಮಾಣ ಮಾಡಲು ಹೊರಟಿದ್ದಾರೆ. ಕಥೆ ಹೇಳಬೇಕು ಬಾ ಎಂದರು. ನಾನು ಶಶಿಧರ್ ಹಾಗೂ…

ಕನ್ನಡದ ಯುವತಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಹೈಡ್ & ಸೀಕ್ ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ .

ಕನ್ನಡದ ಯುವತಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಕಿರು ಚಿತ್ರ ಹೈಡ್ & ಸೀಕ್ ಪ್ರತಿಷ್ಠಿತ ಕೇನ್ಸ್ ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ .

“ಹೈಡ್ ಅಂಡ್ ಸೀಕ್” ಕಿರುಚಿತ್ರವನ್ನು ಭಾರತದ ಯುವ ನಿರ್ದೇಶಕಿ 20 ವರ್ಷ ವಯಸ್ಸಿನ ಮಿಸ್ ಕರೆನ್ ಕ್ಷಿತಿ ಸುವರ್ಣ ಅವರು ನಿರ್ದೇಶಿಸಿದ್ದಾರೆ. ಇದು ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು ಹೊಂದಿರುವ 10 ನಿಮಿಷಗಳ ಸ್ವತಂತ್ರ ಕಿರುಚಿತ್ರವಾಗಿದೆ. ಇಂದಿನ ಜಗತ್ತಿನಲ್ಲಿ ಇದು ಪ್ರಸ್ತುತವಾದ ವಿಷಯವಾಗಿದೆ ಏಕೆಂದರೆ ನಾವು ಖಿನ್ನತೆ ಮತ್ತು ಸಿಂಜೊಫ್ರೇನಿಯಾ ಕಾಯಿಲೆಯಿಂದ ಕುಟುಂಬ ಹತ್ಯೆಗಳು / ಸಾರ್ವಜನಿಕ, ಸಾಮೂಹಿಕ ಹತ್ಯೆಗಳನ್ನು ನೋಡುತ್ತಿದ್ದೇವೆ. ಕರೆನ್ ಕ್ಷಿತಿ ಸುವರ್ಣ ಅವರು ತಮ್ಮ ಕ್ರಾಫ್ಟ್ ಮತ್ತು ಕಲೆಗಾಗಿ…

ದುಬೈ ನಲ್ಲಿ “ಜಸ್ಟ್ ಪಾಸ್”.

ದುಬೈ ನಲ್ಲಿ “ಜಸ್ಟ್ ಪಾಸ್”.

ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಟೀಸರ್ ಡಿಸೆಂಬರ್ 10ರಂದು ದುಬೈನಲ್ಲಿ ನಡೆಯಲಿರುವ “ದುಬೈ ದಸರಾ” ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ನಾಡಿನ ಹೆಸರಾಂತ ಕಲಾವಿದರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ “ಜಸ್ಟ್ ಪಾಸ್” ಚಿತ್ರದ ಟೀಸರ್ ಪ್ರದರ್ಶನವಾಗಲಿದೆ. ಡಿಸೆಂಬರ್‌ 13‌ ರಂದು ಈ ಚಿತ್ರದ ಟೀಸರ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಶ್ರೀ, ಪ್ರಣತಿ, ರಂಗಾಯಣರಘು…

ಅಥಿ ಐ ಲವ್ ಯು ಸಿನಿಮಾ ನೋಡಿ ಜೋಡಿಗಳಿಗೆ ಗೋವಾಗೆ ಹೋಗುವ ವಿಶೇಷ ಆಫರ್!

ಅಥಿ ಐ ಲವ್ ಯು ಸಿನಿಮಾ ನೋಡಿ ಜೋಡಿಗಳಿಗೆ ಗೋವಾಗೆ ಹೋಗುವ ವಿಶೇಷ ಆಫರ್!

ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಲೋಕೇಂದ್ರ ಸೂರ್ಯ ಮತ್ತು ಓಂ ಪ್ರಕಾಶ್ ಪುತ್ರಿ ಶ್ರಾವ್ಯರಾವ್ ಜೋಡಿಯಾಗಿ ನಟಿಸಿರುವ ವಿಭಿನ್ನ ಕಥಾವಸ್ತು ಹೊಂದಿರುವ ಅತಿ ಐ ಲವ್ ಯು. ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ಪ್ರೇಕ್ಷಕರನ್ನು ಥಿಯೇಟರಿಗೆ ಕರೆತರಲು ಅತಿ ಚಿತ್ರತಂಡ ವಿಭಿನ್ನ ರೀತಿಯ ಯೋಜನೆ ರೂಪಿಸಿದೆ. ಟಿಕೆಟ್ ಜೊತೆ ಕೂಪನ್ ಒಂದನ್ನು ನೀಡುತ್ತಿದ್ದು, ಲಕ್ಕಿ ಡ್ರಾ…

ಮನಮೋಹಕವಾಗಿದೆ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು.

ಮನಮೋಹಕವಾಗಿದೆ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು.

ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್ ನಿರ್ದೇಶಿಸಿರುವ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು ರಾಜಕೀಯ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳನ್ನು ನಟಿ ರೂಪಿಕಾ, ಮಮತ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಲೋಕಾರ್ಪಣೆಯಾಗಿದೆ. ನಂತರ ಚಿತ್ರತಂಡದ ಸದಸ್ಯರು “ಲೇಡಿಸ್ ಬಾರ್” ಕುರಿತು ಮಾಹಿತಿ ನೀಡಿದರು. “ಲೇಡಿಸ್ ಬಾರ್” ಶೀರ್ಷಿಕೆ ಕೇಳಿದ ತಕ್ಷಣ…

ಮಾತಿನಮನೆಯಲ್ಲಿ “ಕೃಷ್ಣಂ ಪ್ರಣಯ ಸಖಿ” . ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರದ ಚಿತ್ರೀಕರಣ ಮುಕ್ತಾಯ .

ಮಾತಿನಮನೆಯಲ್ಲಿ “ಕೃಷ್ಣಂ ಪ್ರಣಯ ಸಖಿ” . ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರದ ಚಿತ್ರೀಕರಣ ಮುಕ್ತಾಯ .

ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಡಬ್ಬಿಂಗ್ ನಡೆಯುತ್ತಿದ್ದು, ಡಬ್ಬಿಂಗ್ ಕೂಡ ಮುಕ್ತಾಯ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ. ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ…

ನವೆಂಬರ್ ಕೊನೆಯಲ್ಲಿ ರಾಗಿಣಿ “ರಾಜ್ಯೋತ್ಸವ”‌ . ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ.

ನವೆಂಬರ್ ಕೊನೆಯಲ್ಲಿ ರಾಗಿಣಿ “ರಾಜ್ಯೋತ್ಸವ”‌ . ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ.

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಶುಭದಿನ. ಇಡೀ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ಆಚರಿಸುವ ವಾಡಿಕೆ ಇದೆ. ಈ ಕನ್ನಡ ಮಾಸದ ಕೊನೆಯ ದಿನ(ನವೆಂಬರ್ 30) ದಂದು ರಾಗಿಣಿ ದ್ವಿವೇದಿ ಅಭಿನಯದ “ರಾಜ್ಯೋತ್ಸವ ದಿ ಆಂಥಮ್” ಎಂಬ ವಿಡಿಯೋ ಸಾಂಗ್ ಐಪ್ಲೆಕ್ಸ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ “ವಂಶಿ” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ವಿಜಯ್ ಕೌಂಡಿನ್ಯ ಅವರ ಸಹೋದರ ವಿಕ್ರಮ್ ಶೀನಿವಾಸ್ ಈ ವಿಡಿಯೋ ಸಾಂಗ್ ನಿರ್ಮಾಣ‌ ಮಾಡಿದ್ದಾರೆ. ವಿಕ್ರಮ್ ಅವರ ತಂದೆ…

‘800’ – ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್‌ ಜೀವನಗಾಥೆ ಜಿಯೊಸಿನಿಮಾದಲ್ಲಿ ! ಮುತ್ತಯ್ಯ ಮುರಳೀಧರನ್‌ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ ‘800’ ಸಿನಿಮಾವನ್ನು ಡಿಸೆಂಬರ್ 2ರಿಂದ ಜಿಯೊಸಿನಿಮಾದಲ್ಲಿ ಕನ್ನಡದಲ್ಲಿಯೇ ನೋಡಿ.

‘800’ – ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್‌ ಜೀವನಗಾಥೆ ಜಿಯೊಸಿನಿಮಾದಲ್ಲಿ ! ಮುತ್ತಯ್ಯ ಮುರಳೀಧರನ್‌ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ ‘800’ ಸಿನಿಮಾವನ್ನು ಡಿಸೆಂಬರ್ 2ರಿಂದ ಜಿಯೊಸಿನಿಮಾದಲ್ಲಿ ಕನ್ನಡದಲ್ಲಿಯೇ ನೋಡಿ.

ವೈವಿಧ್ಯಮಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಹೊಂದಿರುವ ಕಂಟೆಂಟ್‌ ಅನ್ನು ಜನರಿಗೆ ನೀಡುವಲ್ಲಿ JioCinema ಮುಂಚೂಣಿಯಲ್ಲಿದೆ. ಆ ಪ್ರಯತ್ನದ ಭಾಗವಾಗಿ ಇದೀಗ, ಮುತ್ತಯ್ಯ ಮುರಳೀಧರನ್‌ ಅವರ ಜೀವನವನ್ನಾಧರಿಸಿದ, ಎಂ.ಎಸ್‌. ಶ್ರೀಪತಿ ನಿರ್ದೇಶಿಸಿರುವ ‘800’ ಸಿನಿಮಾ JioCinemaದಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದೇ ಡಿಸೆಂಬರ್ 2ರಂದು JioCinema ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸಿನಿಮಾ, ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ್ದು. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿದ್ದ ಬೌಲರ್ ಬದುಕಿನ…

“ಕಾಣೆಯಾಗಿದ್ದಾಳೆ” ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ.

“ಕಾಣೆಯಾಗಿದ್ದಾಳೆ” ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ.

ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಕೆ ನಿರ್ದೇಶಿಸಿರುವ“ಕಾಣೆಯಾಗಿದ್ದಾಳೆ” ಹುಡುಕಿಕೊಟ್ಟವರಿಗೆ ಬಹುಮಾನ ಚತ್ರ ತೆರೆಗೆ ಬರಲು ಸಿದ್ದವಾಗಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿಗೆ ಈ ಚಿತ್ರದ ಹಾಡೊಂದನ್ನು ದಾವಣಗೆರೆ ಮಹಾನಗರ ಪಾಲಿಕೆಯ ಉಪ ಮೇಯರ್ ಯೋಗೇಶ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು‌. ಇದೊಂದು ನೈಜ ಹಾಗೂ ಕಾಲ್ಪನಿಕ ಕಥಾ ಆಧಾರಿತ ಚಿತ್ರ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳು ನಿಯಮಿತವಾಗಿ ಬಳಸಬೇಕು. ಇಲ್ಲದಿದ್ದರೆ ಅಪಾಯ ಖಂಡಿತ ಎಂಬ ವಿಷಯವನ್ನು…

ಬಹು ನಿರೀಕ್ಷಿತ “ಅನಿಮಲ್” ಚಿತ್ರ ಡಿಸೆಂಬರ್ 1 ರಂದು ಬಿಡುಗಡೆ .

ಬಹು ನಿರೀಕ್ಷಿತ “ಅನಿಮಲ್” ಚಿತ್ರ ಡಿಸೆಂಬರ್ 1 ರಂದು ಬಿಡುಗಡೆ .

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಹಾಗೂ ರಣ್ ಬೀರ್ ಕಪೂರ್ , ಕನ್ನಡತಿ ರಶ್ಮಿಕಾ ಮಂದಣ್ಣ, ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಅನಿಮಲ್” ಡಿಸೆಂಬರ್ 1 ರಂದು ತೆರೆಗೆ ಬರುತ್ತಿದೆ. ಹೆಸರಾಂತ ಕೆ.ವಿ.ಎನ್ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ಮಾದ್ಯಮದೊಂದಿಗೆ ತಂಡದ ಸದಸ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ನಟ ರಣಬೀರ್ ಕಪೂರ್ ಮಾತನಾಡಿ, ಇದು ವಿಭಿನ್ನವಾದ ಸಿನಿಮಾ. ತಂದೆ –…