“ರಾಯರ ದರ್ಶನ”: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಸಂಗಮ; ಮಂತ್ರಾಲಯ ರಾಯರ ಕುರಿತಾದ ಆಲ್ಬಂ ಚಿತ್ರೀಕರಣ ಯಶಸ್ವಿ
ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಖ್ಯಾತರಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಕೋಟ್ಯಂತರ ಭಕ್ತರಿಗೆ ಇದೊಂದು ಅದ್ಭುತವಾದ ಸಿಹಿ ಸುದ್ದಿ. ರಾಯರ ದಿವ್ಯ ಚರಿತ್ರೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ದೃಶ್ಯೀಕರಿಸುವ “ರಾಯರ ದರ್ಶನ” ಆಲ್ಬಂ ಸಾಂಗ್ ಸದ್ದಿಲ್ಲದೆ ಸಿದ್ಧವಾಗುತ್ತಿದ್ದು, ಶ್ರೀ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ವಿಶೇಷ ಪ್ರಾಜೆಕ್ಟ್ಗೆ ಚಿತ್ರರಂಗದ ದೈತ್ಯ ಪ್ರತಿಭೆಗಳು ಕೈಜೋಡಿಸಿರುವುದು ವಿಶೇಷ. ತಾರಾ ಮೆರುಗು – ದ್ವಿಭಾಷಾ ಸಂಭ್ರಮಈ ಆಲ್ಬಂ ಕೇವಲ ಒಂದು…
