ನಿರ್ದೇಶಕ ಸಿಂಪಲ್ ಸುನಿ ಅವರಿಂದ ಬಿಡುಗಡೆಯಾಯಿತು “”ಬ್ಯಾಂಕ್ of ಭಾಗ್ಯಲಕ್ಷ್ಮಿ ಚಿತ್ರದ ಪೋಸ್ಟರ್ . ಇದು ದೀಕ್ಷಿತ್ ಶೆಟ್ಟಿ ಅಭಿನಯದ ಚಿತ್ರ‌ .

ನಿರ್ದೇಶಕ ಸಿಂಪಲ್ ಸುನಿ ಅವರಿಂದ ಬಿಡುಗಡೆಯಾಯಿತು “”ಬ್ಯಾಂಕ್ of ಭಾಗ್ಯಲಕ್ಷ್ಮಿ ಚಿತ್ರದ ಪೋಸ್ಟರ್ . ಇದು ದೀಕ್ಷಿತ್ ಶೆಟ್ಟಿ ಅಭಿನಯದ ಚಿತ್ರ‌ .

‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್.ಕೆ ಪ್ರಕಾಶ್ ತಮ್ಮ ನಿರ್ಮಾಣದ 5 ನೇ ಚಿತ್ರದ ಪೋಸ್ಟರ್ ಇತ್ತೀಚಿಗೆ ಬಿಡುಗಡೆಯಾಗಿದೆ.ದಿಯಾ , ದಸರಾ, KTM ಹಾಗೂ ಬ್ಲಿಂಕ್ ಅಭಿನಯಕ್ಕೆ ಹೆಸರು ಮಾಡಿದ ಮೇಲೆ ತೆಲುಗು, ಮಲಯಾಳಂಗಳಲ್ಲಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ಈ ಚಿತ್ರದ ನಾಯಕಿ. ಪ್ರೇಮಂ ಪೂಜ್ಯಂ ಹಾಗೂ ಕೌಸಲ್ಯ ಸುಪ್ರಜಾ ಯಶಸ್ಸಿನ ಬಳಿಕ ಬೃಂದಾ ಆಚಾರ್ಯ “ಸನ್ ಆಫ್ ಸತ್ಯಮೂರ್ತಿ” ಚಿತ್ರದಲ್ಲಿ…

“ಸಂಭವಾಮಿ ಯುಗೇಯುಗೇ” ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ.ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತೇ ಈ ಚಿತ್ರದ ಶೀರ್ಷಿಕೆ .

“ಸಂಭವಾಮಿ ಯುಗೇಯುಗೇ” ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆ.ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತೇ ಈ ಚಿತ್ರದ ಶೀರ್ಷಿಕೆ .

ಶ್ರೀಕೃಷ್ಣ ಭಗವದ್ಗೀತೆಯಲ್ಲಿ “ಸಂಭವಾಮಿ ಯುಗೇಯುಗೇ” ಎಂಬ ಮಾತನ್ನು ಹೇಳಿದ್ದಾನೆ. ಅಧರ್ಮ ಹೆಚ್ಚಾದಾಗ ನಾನು ಪುನಃ ಪುನಃ ಬರುತ್ತಿರುತ್ತೇನೆ ಎಂದು ಈ ಮಾತಿನ ಅರ್ಥ. ಕೃಷ್ಣ ಹೇಳಿದ ಈ ಮಾತೇ ಈಗ ಚಿತ್ರದ ಶೀರ್ಷಿಕೆಯಾಗಿದೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸುತ್ತಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭಾವಮಿ ಯುಗೇಯುಗೇ” ಚಿತ್ರದ ಕ್ಯಾರೆಕ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ‌. ಭಗವದ್ಗೀತೆಯ ಈ ವಾಕ್ಯವನೇ ಆದರ್ಶವಾಗಿಟ್ಟುಕೊಂಡು…

ಅಕ್ಷಯ ತೃತೀಯದಂದು ಆರಂಭವಾಯಿತು “ಶಿವಶರಣ ಮೋಳಿಗೆ ಮಾರಯ್ಯ” ಚಿತ್ರ . ಭಕ್ತಿಪ್ರಧಾನ ಈ ಚಿತ್ರಕ್ಕೆ ಕೊಪ್ಪಳದ ಗವಿಮಠದ ಶ್ರೀಗಳಿಂದ ಚಾಲನೆ .

ಅಕ್ಷಯ ತೃತೀಯದಂದು ಆರಂಭವಾಯಿತು “ಶಿವಶರಣ ಮೋಳಿಗೆ ಮಾರಯ್ಯ” ಚಿತ್ರ . ಭಕ್ತಿಪ್ರಧಾನ ಈ ಚಿತ್ರಕ್ಕೆ ಕೊಪ್ಪಳದ ಗವಿಮಠದ ಶ್ರೀಗಳಿಂದ ಚಾಲನೆ .

ಹೆಸರಾಂತ ಶಿವಶರಣ ಮೋಳಿಗೆ ಮಾರಯ್ಯ ಚಿತ್ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಮಠದಲ್ಲಿ ಆರಂಭವಾಗಿದೆ. ಪೂಜ್ಯ ಗವಿ ಸಿದ್ದೇಶ್ವರ ಮಠದ ಶ್ರೀಗಳು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. “ಶ್ರೀ ಜಗನ್ನಾಥದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಹಾಗೂ ಇತ್ತೀಚಿಗೆ ತೆರೆಕಂಡ “ದಾಸವರೇಣ್ಯ ಶ್ರೀ ವಿಜಯದಾಸರು” ಸೇರಿದಂತೆ ನಾಡಿನ ಹೆಸರಾಂತ ಹರಿದಾಸರ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾತಾಂಬುಜ ಮೂವೀಸ್ ಅರ್ಪಿಸುವ ಹಾಗೂ ಹವಾಲ್ದಾರ್ ಫಿಲಂಸ್ ನ ಮೂಲಕ ಮಧುಸೂದನ್ ಹವಾಲ್ದಾರ್…

ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪ’ ಚಿತ್ರದ ಚಿತ್ರೀಕರಣ ಮುಕ್ತಾಯ

ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪ’ ಚಿತ್ರದ ಚಿತ್ರೀಕರಣ ಮುಕ್ತಾಯ

ಮೈಸೂರಿನ ಬಾಬುನಾಯ್ಕ್ ಅವರು ತಮ್ಮ ಮಲೈಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ‘ಸ್ವಪ್ನಮಂಟಪ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಬರಗೂರು ರಾಮಚಂದ್ರಪ್ಪನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದಾರೆ. ‘ಸ್ವಪ್ನಮಂಟಪ’ ಚಿತ್ರವು ಈಗಾಗಲೇ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸಗಳನ್ನು ಮುಗಿಸಿದೆ. ಕನಕಪುರ ರಸ್ತೆಯ ಒಂದು ಹಳ್ಳಿಯಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಹೊಸಮನೆ ಮೂರ್ತಿಯವರು ಈ ಸೆಟ್ ನಿರ್ಮಾಣ ಮಾಡಿದ್ದಾರೆ.‘ಸ್ವಪ್ನಮಂಟಪ’ ಚಿತ್ರವು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವ ಕಥಾವಸ್ತುವನ್ನು…

“ದಿ ಸೂಟ್” ಚಿತ್ರದ ವಿಶೇಷ ಪಾತ್ರದಲ್ಲಿ ಸುಜಯ್ ಆರ್ಯ . ವಿಭಿನ್ನ ಕಥೆಯ ಈ ಚಿತ್ರ ಮೇ 17 ರಂದು ತೆರೆಗೆ .

“ದಿ ಸೂಟ್” ಚಿತ್ರದ ವಿಶೇಷ ಪಾತ್ರದಲ್ಲಿ ಸುಜಯ್ ಆರ್ಯ . ವಿಭಿನ್ನ ಕಥೆಯ ಈ ಚಿತ್ರ ಮೇ 17 ರಂದು ತೆರೆಗೆ .

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಹೆಚ್ಚು ನಿರ್ಮಾಣವಾಗುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ “ದಿ ಸೂಟ್” ಚಿತ್ರ ಮೇ 17 ರಂದು ತೆರೆ ಕಾಣಲಿದೆ. “ಸೂಟ್” ನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸುಜಯ್ ಆರ್ಯ ಅವರು ಅಭಿನಯಿಸಿದ್ದಾರೆ. ಮೂಲತಃ ಉದ್ಯಮಿಯಾಗಿರುವ ಸುಜಯ್ ಆರ್ಯ ಅವರು ಈ ಹಿಂದೆ ರಾಮನಾಥ್ ಋಗ್ವೇದಿ ನಿರ್ದೇಶನದ “ಅಧಿಕಾರ” ಚಿತ್ರದಲ್ಲಿ ನಟಿಸಿದ್ದರು. ಸುಜಯ್ ಆರ್ಯ ಅವರನ್ನು ನೋಡಿದವರು ನೀವು ಹೋರೋ ತರ ಕಾಣುತ್ತೀರಾ.. ಸಿನಿಮಾದಲ್ಲಿ ನಟಿಸಿ ಎನ್ನುತ್ತಿದರಂತೆ….

ಸದ್ಯದಲ್ಲೇ ನಿಮ್ಮ ಮುಂದೆ “ವಿಕಾಸ ಪರ್ವ” .

ಸದ್ಯದಲ್ಲೇ ನಿಮ್ಮ ಮುಂದೆ “ವಿಕಾಸ ಪರ್ವ” .

ಕನ್ನಡ ಚಿತ್ರರಂಗದಲ್ಲೀಗ ಉತ್ತಮ ಕಂಟೆಂಟ್ ಚಿತ್ರಗಳು ಯಶಸ್ವಿಯಾಗುತ್ತಿದೆ‌. ಅಂತಹ ಉತ್ತಮ ಕಂಟೆಂಟ್ ನೊಂದಿಗೆ ಬರುತ್ತಿರುವ “ವಿಕಾಸ ಪರ್ವ” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದೆ. “ವಿಕಾಸ ಪರ್ವ” ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಉತ್ತಮ ಸಂದೇಶವುಳ್ಳ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜವಾಡಿ, ಕುರಿ ರಂಗ, ಸಮೀರ್…

ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಚಿತ್ರ ಎನ್ನುತ್ತಾರೆ ನಾಯಕಿ ಚಾಂದಿನಿ .ಚಿತ್ರ ರೀ ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ನೆನಪುಗಳನ್ನು ಹಂಚಿಕೊಂಡ ನಟಿ .

ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಚಿತ್ರ ಎನ್ನುತ್ತಾರೆ ನಾಯಕಿ ಚಾಂದಿನಿ .ಚಿತ್ರ ರೀ ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ನೆನಪುಗಳನ್ನು ಹಂಚಿಕೊಂಡ ನಟಿ .

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A”. ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. 2024 ರ ಮೇ 17 ರಂದು “A” ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಾಯಕಿ ಚಾಂದನಿ ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದು ನಾಯಕಿ ಚಾಂದಿನಿ ಜೀವನವೆನ್ನೇ ಬದಲಿಸಿದ ಒಂದು ಸಿನಿಮಾ. ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಅಂದರೆ ತಪ್ಪಾಗಲಾರದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಅಂತ…

‘ಯೂಟ್ಯೂಬ್’ನಲ್ಲಿ ಟ್ರೆಂಡಾಯ್ತು, ಉತ್ತರ ಕರ್ನಾಟಕದ ‘ನೈಂಟಿ’!

‘ಯೂಟ್ಯೂಬ್’ನಲ್ಲಿ ಟ್ರೆಂಡಾಯ್ತು, ಉತ್ತರ ಕರ್ನಾಟಕದ ‘ನೈಂಟಿ’!

ಕಳೆದ ವರ್ಷದ ಜೂನ್ ತಿಂಗಳಲ್ಲಿ ತೆರೆಕಂಡು ಸದ್ದು ಮಾಡಿದ್ದ ‘ನೈಂಟಿ ಬಿಡಿ ಮನೀಗ್ ನಡಿ’ ಚಿತ್ರ ಈಗ ಮತ್ತೆ ಸದ್ದು ಮಾಡತೊಡಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡು, ಭರ್ಜರಿ ಹವಾ ಮಾಡಿಕೊಂಡಿದ್ದ ಈ ಚಿತ್ರವು, ಸದ್ಯ Panorama Cinetimes ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿ, ಟ್ರೆಂಡಿಂಗ್ ನಲ್ಲಿದೆ. ದಿನದಿಂದ ದಿನಕ್ಕೆ ವೀವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ, “ಆರ್ಗಾನಿಕ್ ಲಕ್ಷ ವೀವ್ಸ್” (100K) ದಾಟಿಸಿಕೊಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ‘ಅಮ್ಮಾ ಟಾಕೀಸ್ ಬಾಗಲಕೋಟ’ ಬ್ಯಾನರಿನಡಿ, ರತ್ನಮಾಲಾ ಬಾದರದಿನ್ನಿ ನಿರ್ಮಿಸಿದ್ದ…

ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಯಿತು ನಾಯಕಿ ಎಸ್ತರ್ ನರೋನ್ಹ ಅವರ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ .

ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಯಿತು ನಾಯಕಿ ಎಸ್ತರ್ ನರೋನ್ಹ ಅವರ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ .

ಕಳೆದ ಹತ್ತು ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿರುವ ನಾಯಕಿ ಎಸ್ತರ್ ನರೋನ್ಹ, ಗಾಯಕಿಯಾಗೂ ಜನಪ್ರಿಯ. ಈಗ ಎಸ್ತರ್ ನರೋನ್ಹ ಹೊಸ ಹೆಜ್ಜೆ ಇಟ್ಟಿದ್ದಾರೆ.ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ ಆರಂಭಿಸಿದ್ದಾರೆ. ಇತ್ತೀಚೆಗೆ ಇದರ ಉದ್ಘಾಟನೆ ಅದ್ದೂರಿಯಾಗಿ ನೆರವೇರಿತು. ಈ ಸಲೂನ್ ಬಗ್ಗೆ ಎಸ್ತರ್ ನರೋನ್ಹ ಮಾಹಿತಿ ನೀಡಿದ್ದಾರೆ. ನಾಯಕಿಯಾಗಿ ಹಾಗೂ ಗಾಯಕಿಯಾಗಿ ನಾನು ನಿಮಗೆ ಚಿರಪರಿಚಿತ. ನೀವು ನೀಡುತ್ತಿರುವ…

ಬಿ.ಎಂ.ಎಸ್ ಕಾಲೇಜಿನಲ್ಲಿ “ಗೌರಿ” ಚಿತ್ರದ ಮೊದಲ ಹಾಡಿನ ಅನಾವರಣ . ಇದು ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರ .

ಬಿ.ಎಂ.ಎಸ್ ಕಾಲೇಜಿನಲ್ಲಿ “ಗೌರಿ” ಚಿತ್ರದ ಮೊದಲ ಹಾಡಿನ ಅನಾವರಣ . ಇದು ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರ .

ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ “ಗೌರಿ” ಚಿತ್ರದ ಮೊದಲ ಹಾಡು ಲೋಕಾರ್ಪಣೆಯಾಯಿತು. ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಅವಿನಾಶ್, ವಿಷ್ಣು ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಜಯ್…