ಪಂಚಭಾಷೆಗಳಲ್ಲಿ “ಗನ್ಸ್ ಅಂಡ್ ರೋಸಸ್” ಗೆ ಸೆನ್ಸಾರ್ ಪೂರ್ಣ .

ಪಂಚಭಾಷೆಗಳಲ್ಲಿ “ಗನ್ಸ್ ಅಂಡ್ ರೋಸಸ್” ಗೆ ಸೆನ್ಸಾರ್ ಪೂರ್ಣ .

ಹೆಚ್ ಆರ್ ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದ ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕರಾಗಿ ನಟಿಸಿರುವ ಅಂಡರ್ ವಲ್ಡ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ “ಗನ್ಸ್ ಅಂಡ್” ರೋಸಸ್” ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿದೆ. ಐದು ಭಾಷೆಗಳಲ್ಲೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿದ್ದು, ಯು/ಎ ಪ್ರಮಾಣಪತ್ರ ನೀಡಿದೆ. ಸದ್ಯದಲ್ಲೇ ಟೀಸರ್ ಹಾಗೂ ಹಾಡುಗಳು ರಿಲೀಸ್ ಆಗಲಿದ್ದು, ಏಪ್ರಿಲ್…

ಹಿಟ್ ಆಯ್ತು “ರಾನಿ” ಹಾಡು ….”ಕೋಲೆ ಕೋಲೆ” ಎನ್ನುತ್ತಾ ಬಂದರು ಕಿರಣ್ ರಾಜ್.

ಹಿಟ್ ಆಯ್ತು “ರಾನಿ” ಹಾಡು ….”ಕೋಲೆ ಕೋಲೆ” ಎನ್ನುತ್ತಾ ಬಂದರು ಕಿರಣ್ ರಾಜ್.

ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರ ಪೊಸ್ಟರ್ ಹಾಗೂ ಟೀಸರ್ ಮೂಲಕ ಈಗಾಗಲೇ ಸದ್ದು ಮಾಡಿದೆ. ಮಹಾಶಿವರಾತ್ರಿಯ ದಿನದಂದು “ರಾನಿ” ಚಿತ್ರದ “ಕೋಲೆ ಕೋಲೆ” ಎನ್ನುವ ಜಾನಪದ ಶೈಲಿಯ ಮಾಸ್ ಹಾಡು ಟಿ ಸಿರೀಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಪಡ್ಡೆ ಹುಡುಗರ ಮನಸ್ಸು ಗೆದ್ದಿದೆ. ಈಗಾಗಲೇ ಒಂದು ಮಿಲಿಯನ್ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಪ್ರಾರಂಬದಿಂದಲೂ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ರಾನಿ ತಂಡ ಈ ಬಾರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರದ ನಾಯಕ ನಟ…

ಮಾರ್ಚ್ 22 ರಂದು ಬಿಡುಗಡೆಯಾಗಲಿದೆ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್”.

ಮಾರ್ಚ್ 22 ರಂದು ಬಿಡುಗಡೆಯಾಗಲಿದೆ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್”.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಹಾಗೂ ಪ್ರಮೋದ್ ಜಯ ನಿರ್ದೇಶನದ “ದಿಲ್ ಖುಷ್” ಚಿತ್ರ ಇದೇ ಮಾರ್ಚ್ 22 ರಂದು ತೆರೆಗೆ ಬರಲಿದೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್” ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದೆ. ಸಿಂಪಲ್ ಸುನಿ ಅವರ ಬಳಿ ಕಾರ್ಯ ನಿರ್ವಹಿಸಿರುವ ಪ್ರಮೋದ್ ಜಯ ಅವರು ನಿರ್ದೇಶಿಸಿರುವ ಚೊಚ್ಚಲ ಚಿತ್ರವಿದು. ಕಥೆ, ಚಿತ್ರಕಥೆ…

ಶರಣ್ ಅಭಿನಯದ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಏಪ್ರಿಲ್ 5 ರಂದು ತೆರೆಗೆ.

ಶರಣ್ ಅಭಿನಯದ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಏಪ್ರಿಲ್ 5 ರಂದು ತೆರೆಗೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಛೂ‌ ಮಂತರ್” ಚಿತ್ರ ಇದೇ ಏಪ್ರಿಲ್ 5 ರಂದು ರಾಜ್ಯಾದ್ಯಂತ. ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್ ಮೂಲಕ ಮನೆಮಾತಾಗಿರುವ “ಛೂ ಮಂತರ್” ಚಿತ್ರದ ಟ್ರೇಲರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದೊಂದು ಹಾರಾರ್ ಚಿತ್ರವಾಗಿದ್ದು, ಈ ಹಿಂದೆ ಬಂದಿರುವ ಹಾರಾರ್ ಚಿತ್ರಗಳಿಗಿಂತ ಸ್ವಲ್ಪ…

.ಮಹರ್ಷಿ ಆನಂದ ಗುರೂಜಿ ಅವರಿಂದ ಬಿಡುಗಡೆಯಾಯಿತು “ಕೋರ” ಚಿತ್ರದ “ಬಾನಿನಿಂದ” ಹಾಡು . ಸುನಾಮಿ ಕಿಟ್ಟಿ ಅಭಿನಯದ ಈ ಚಿತ್ರಕ್ಕೆ ಪಿ.ಮೂರ್ತಿ ನಿರ್ಮಾಣ ಹಾಗೂ ಒರಟ ಶ್ರೀ ನಿರ್ದೇಶನ.ಮಹರ್ಷಿ ಆನಂದ ಗುರೂಜಿ ಅವರಿಂದ ಬಿಡುಗಡೆಯಾಯಿತು “ಕೋರ” ಚಿತ್ರದ “ಬಾನಿನಿಂದ” ಹಾಡು .

.ಮಹರ್ಷಿ ಆನಂದ ಗುರೂಜಿ ಅವರಿಂದ ಬಿಡುಗಡೆಯಾಯಿತು “ಕೋರ” ಚಿತ್ರದ “ಬಾನಿನಿಂದ” ಹಾಡು . ಸುನಾಮಿ ಕಿಟ್ಟಿ ಅಭಿನಯದ ಈ ಚಿತ್ರಕ್ಕೆ ಪಿ.ಮೂರ್ತಿ ನಿರ್ಮಾಣ ಹಾಗೂ ಒರಟ ಶ್ರೀ ನಿರ್ದೇಶನ.ಮಹರ್ಷಿ ಆನಂದ ಗುರೂಜಿ ಅವರಿಂದ ಬಿಡುಗಡೆಯಾಯಿತು “ಕೋರ” ಚಿತ್ರದ “ಬಾನಿನಿಂದ” ಹಾಡು .

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ “ಬಾನಿನಿಂದ” ಹಾಡು ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಮಹರ್ಷಿ ಆನಂದ ಗುರೂಜಿ ಅವರು ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ ಅವರು ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಿ.ಆರ್.ಹೇಮಂತ್ ಕುಮಾರ್ ಈ ಚಿತ್ರದ ಸಂಗೀತ ನಿರ್ದೇಶಕರು. ಹಾಡು ಬಿಡುಗಡೆ ನಂತರ ಚಿತ್ರತಂಡದ…

“ರೋಜಿ” ಚಿತ್ರದಲ್ಲಿ ಒರಟ ಪ್ರಶಾಂತ್ .

“ರೋಜಿ” ಚಿತ್ರದಲ್ಲಿ ಒರಟ ಪ್ರಶಾಂತ್ .

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ”. ಈ ಚಿತ್ರದಲ್ಲಿ ಈಗಾಗಲೇ ಶ್ರೀನಗರ ಕಿಟ್ಟಿ ಹಾಗೂ “ಲಿಯೋ” ಚಿತ್ರದ ಸ್ಯಾಂಡಿ ಕುಮಾರ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟ ಒರಟ ಪ್ರಶಾಂತ್ “ರೋಜಿ” ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸ್ವಾಮಿ ಅಣ್ಣ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಒರಟ ಪ್ರಶಾಂತ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಚಿತ್ರತಂಡದಿಂದ ಬಿಡುಗಡೆಯಾಗಿದೆ. “ರೋಜಿ” ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. “ರೋಜಿ” ಚಿತ್ರ ಸ್ಟೈಲೀಶ್ ಗ್ಯಾಂಗ್ ಸ್ಟರ್ ಡ್ರಾಮ ಎಂದು ಮಾತನಾಡಿದ ನಿರ್ದೇಶಕ…

ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ರತ್ನ’ ಚಿತ್ರದ ಟ್ರೇಲರ್ ಇದು ಅಪ್ಪು ಅಭಿಮಾನಿಯ ಚಿತ್ರ

ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ರತ್ನ’ ಚಿತ್ರದ ಟ್ರೇಲರ್ ಇದು ಅಪ್ಪು ಅಭಿಮಾನಿಯ ಚಿತ್ರ

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಟ್ರೇಲರ್ ಮಾರ್ಚ್ 17, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕಿ ಪುನೀತ್ ರಾಜಕುಮಾರ್ ಅಭಿಮಾನಿ ಆಗಿರುತ್ತಾಳೆ.‌ ಅಪ್ಪು ಅಭಿಮಾನಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ನಿರ್ದೇಶಕ ಬಸವರಾಜ್ ಬಳ್ಳಾರಿ ತಿಳಿಸಿದ್ದಾರೆ. ಇತ್ತೀಚಿಗೆ “ರತ್ನ” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣಪತ್ರ ನೀಡಿದೆ. ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ನಿರ್ದೇಶಕ ಬಸವರಾಜ್ ಬಳ್ಳಾರಿ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ…

“ಆದಿಪರ್ವ”ದ ಮೂಲಕ ಖ್ಯಾತ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಕನ್ನಡಕ್ಕೆ .

“ಆದಿಪರ್ವ”ದ ಮೂಲಕ ಖ್ಯಾತ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಕನ್ನಡಕ್ಕೆ .

ತೆಲುಗಿನ ಸೂಪರ್ ಸ್ಟಾರ್ ಮೋಹನ್ ಬಾಬು ಅವರ ಮಗಳು ಮಂಚು ಲಕ್ಷ್ಮೀ “ಆದಿಪರ್ವ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ “ಆದಿಪರ್ವ” ಚಿತ್ರವನ್ನು, ಸಂಜೀವ್ ಕುಮಾರ್ ಮೆಗೋಟಿ ನಿರ್ದೇಶಿಸಿದ್ದಾರೆ. ರವಿ ಕಿರಣ್ ನಿರ್ದೇಶನದ “ಬದುಕು” ಚಿತ್ರಕ್ಕೆ ಚಿತ್ರಕಥೆ – ಸಂಭಾಷಣೆ ಬರೆಯುವ ಮೂಲಕ ಕನ್ನಡಿಗರಿಗೆ ಪರಿಚಯರಾದ ಸಂಜೀವ್ ಕುಮಾರ್ ಮೆಗೋಟಿ, ಪೂಜಾ ಗಾಂಧಿ ಅಭಿನಯದ “ಆಪ್ತ”, “ದಂಡು”, “ಕ್ಯೂ”, ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕಳೆದ 8 ವರ್ಷಗಳಲ್ಲಿ ತೆಲುಗು…

ಟೀಸರ್ ನಲ್ಲೇ ಮೋಡಿ ಮಾಡಿದ “ಫಸ್ಟ್ ನೈಟ್ ವಿತ್ ದೆವ್ವ “. ಇದು ಪ್ರಥಮ್ ಅಭಿನಯದ ಚಿತ್ರ .

ಟೀಸರ್ ನಲ್ಲೇ ಮೋಡಿ ಮಾಡಿದ “ಫಸ್ಟ್ ನೈಟ್ ವಿತ್ ದೆವ್ವ “. ಇದು ಪ್ರಥಮ್ ಅಭಿನಯದ ಚಿತ್ರ .

“ಬಿಗ್ ಬಾಸ್” ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ, ನವೀನ್ ಬೀರಪ್ಪ ನಿರ್ಮಾಣದ ಹಾಗೂ ಪಿ.ವಿ.ಆರ್ ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚಿಗೆ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ “ಬಿಗ್ ಬಾಸ್” ಸ್ಪರ್ಧಿಗಳಾದ “ತುಕಾಲಿ” ಸಂತೋಷ್ ಹಾಗೂ ನಮೃತ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಾನು ನಿರ್ದೇಶಕರ ನಟ ಎಂದು ಮಾತನಾಡಿದ ಪ್ರಥಮ್, ಪಿ.ವಿ.ಆರ್ ಸ್ವಾಮಿ‌ ಅವರು ಬಹುಬೇಗನೇ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಕಳೆದ ನವೆಂಬರ್…

ಕಿಚ್ಚ ಸುದೀಪ್ ಅವರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕರಟಕ ದಮನಕ” ಚಿತ್ರದ ಕ್ಯಾರೆಕ್ಟರ್ ಟೀಸರ್ .

ಕಿಚ್ಚ ಸುದೀಪ್ ಅವರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕರಟಕ ದಮನಕ” ಚಿತ್ರದ ಕ್ಯಾರೆಕ್ಟರ್ ಟೀಸರ್ .

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಾಯಕರಾಗಿ ನಟಿಸಿರುವ “ಕರಟಕ ದಮನಕ” ಚಿತ್ರದ ಕ್ಯಾರೆಕ್ಟರ್ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಮಾರ್ಚ್ 8 ಮಹಾ ಶಿವರಾತ್ರಿ ಶುಭದಿನದಂದು ಚಿತ್ರ ಅದ್ದೂರಿಯಾಗಿ…