“ಕೊರಗಜ್ಜ” ಸಿನಿಮಾ…ರೀ ಶೂಟ್ ವೇಳೆ ಅಗೋಚರ ಶಕ್ತಿಯ ಅಪಾಯದಿಂದ ಪಾರಾದ ನಿರ್ದೇಶಕ ಅತ್ತಾವರ್…! ಸಾಕ್ಷಾತ್ ಕೊರಗಜ್ಜ ನೇ ಪಾರು ಮಾಡಿದ ಎಂದ ನಟಿ ಶ್ರತಿ…!!
ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹುಕೋಟಿ ಬಜೆಟ್ ನ, ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂ ಸ್ ಬ್ಯಾನರ್ ನಡಿಯ “ಕೊರಗಜ್ಜ” ಸಿನಿಮಾ ಆರಂಭದಿಂದಲೂ ಹಲವಾರು ಪವಾಡ ಮತ್ತು ಸವಾಲುಗಳ ಜೊತೆ ತೊಂದರೆ ಗಳನ್ನು ಎದುರಿಸುತ್ತಾ ಬಂದಿರುವ ವಿಚಾರ ಗೊತ್ತೇ ಇದೆ. ಕೊಚಿ ಮತ್ತು ಮುಂಬೈ ನಲ್ಲಿ ಕೊನೆಹಂತದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು,ದೈವ ನರ್ತನದ ಪ್ರಮುಖ ದ್ರಶ್ಯವೊಂದನ್ನು ನಿನ್ನೆ ಮಧ್ಯರಾತ್ರಿಯ ವೇಳೆ ನೂರಾರು ಉರಿವ ಪಂಜುಗಳನ್ನು ಧರಿಸಿಕೊಂಡ ಕೇರಳದ ತೆಯ್ಯಂ ಕಲಾವಿದರ ಮತ್ತು ಮಾಸ್ ಮಾದ ರವರ ಮೈ…