ಈ ವಾರ ತೆರೆಗೆ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ “ತಿಮ್ಮನ ಮೊಟ್ಟೆಗಳು.”
ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ “ತಿಮ್ಮನ ಮೊಟ್ಟೆಗಳು” ಚಿತ್ರ ಈ ವಾರ ಜೂನ್ 27 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಚೊಚ್ಚಲ ನಿರ್ಮಾಣದ ಹಾಗೂ ರಕ್ಷಿತ್ ತೀರ್ಥಹಳ್ಳಿಯವರೇ ಬರೆದ “ಕಾಡಿನ ನೆಂಟರು” ಕಥಾ ಸಂಕಲನದಿಂದ ಆಯ್ದ ಒಂದು ಕಥೆ “ತಿಮ್ಮನ ಮೊಟ್ಟೆಗಳು” ಸಿನಿಮಾವಾಗಿದೆ. ಇತ್ತೀಚೆಗೆ ಅಮೇರಿಕಾದ ಡಾಲಸ್ ನಲ್ಲಿ ಈ ಚಿತ್ರದ ಪ್ರಿಮೀಯರ್ ಶೋ ನಡೆದಿದ್ದು, ಅಲ್ಲಿನ ಜನರು “ತಿಮ್ಮನ ಮೊಟ್ಟೆಗಳು” ಚಿತ್ರ ನೋಡಿ ಫಿದಾ ಆಗಿದ್ದಾರೆ….