ಅಥಿ ಐ ಲವ್ ಯು ಸಿನಿಮಾ ನೋಡಿ ಜೋಡಿಗಳಿಗೆ ಗೋವಾಗೆ ಹೋಗುವ ವಿಶೇಷ ಆಫರ್!

ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಲೋಕೇಂದ್ರ ಸೂರ್ಯ ಮತ್ತು ಓಂ ಪ್ರಕಾಶ್ ಪುತ್ರಿ ಶ್ರಾವ್ಯರಾವ್ ಜೋಡಿಯಾಗಿ ನಟಿಸಿರುವ ವಿಭಿನ್ನ ಕಥಾವಸ್ತು ಹೊಂದಿರುವ ಅತಿ ಐ ಲವ್ ಯು. ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ಇಂದಿನ ದಿನಗಳಲ್ಲಿ ತುಂಬಾ ಕಷ್ಟದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ಪ್ರೇಕ್ಷಕರನ್ನು ಥಿಯೇಟರಿಗೆ ಕರೆತರಲು ಅತಿ ಚಿತ್ರತಂಡ ವಿಭಿನ್ನ ರೀತಿಯ ಯೋಜನೆ ರೂಪಿಸಿದೆ. ಟಿಕೆಟ್ ಜೊತೆ ಕೂಪನ್ ಒಂದನ್ನು ನೀಡುತ್ತಿದ್ದು, ಲಕ್ಕಿ ಡ್ರಾ ನಲ್ಲಿ ಆಯ್ಕೆಯಾದ ಏಳು ಜೋಡಿಗಳನ್ನು ವಿಮಾನದಲ್ಲಿ ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಲಿದೆ. ಆ ಅದೃಷ್ಟ ಶಾಲಿ ದಂಪತಿಗಳು ಯಾರು ಅನ್ನೋದು ಲಕ್ಕಿ ಡ್ರಾ ನಲ್ಲಿ ಗೊತ್ತಾಗಲಿದೆ.

ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಅಥಿ ಐ ಲವ್ ಯು. ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕತೆ ಈ ಚಿತ್ರದಲ್ಲಿದೆ. ಗಂಡ-ಹೆಂಡತಿಯ ನಡುವಿನ ಆಪ್ತ ದೃಶ್ಯಗಳು ಇಲ್ಲಿ ಪ್ರಮುಖವಾಗಿರಲಿದೆ.

ಇವತ್ತಿನ ಮೊಬೈಲ್ ಯುಗದಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳ್ವೆ ನಡೆಸುವುದು ಕಷ್ಟಸಾಧ್ಯ. ಬೆಳೆಯುತ್ತಿರುವ ತಂತ್ರಜ್ಞಾನ ಮನುಷ್ಯ ಸಹಜ ಪ್ರೀತಿ ಪ್ರೇಮ ಪ್ರಣಯಗಳನ್ನು ಯಾಂತ್ರಿಕಗೊಳಿಸಿದೆ. ಬಾಂಧವ್ಯ ಬೆಸುಗೆ ಹಾಕಲಾರದಷ್ಟು ಸವೆದುಹೋಗಿದೆ. ಇಂಥ ಅನೇಕ ಸೂಕ್ಷ್ಮ ಗಳನ್ನು ಅತಿ ಅನಾವರಣಗೊಳಿಸಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಟ್ರೈಲರ್ ಎಲ್ಲರ ಗಮನ ಸೆಳೆದಿದೆ. ಸಾಕಷ್ಟು ಸಮಯದ ನಂತರ ಇಂಥ ಕಂಟೆಂಟ್ ತೆರೆಗೆ ಬರುತ್ತಿದೆ ಅನ್ನೋದು ಟ್ರೇಲರ್ ನೋಡಿದ ಎಲ್ಲರ ಅಭಿಪ್ರಾಯವಾಗಿದೆ.

ಸೆವೆನ್ ರಾಜ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ʻಅಥಿ ಐ ಲವ್ ಯೂʼ ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ನಟಿ ಋತು ಚೈತ್ರ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿರುವುದು ವಿಶೇಷ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments