ಚೆನ್ನೈನಲ್ಲಿ ಪ್ರಧಾನ ಮಂತ್ರಿ ಶ್ರೀನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ.

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಚೆನೈನಲ್ಲಿ ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಸಹ ಜೊತೆಗಿದ್ದರು. ಮೋದಿ ಅವರನ್ನು ಭೇಟಿ ಮಾಡಿದ ನಂತರ ಅರ್ಜುನ್ ಸರ್ಜಾ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದರು. ಈ ಸಮಯದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ನನ್ನನ್ನು ನೋಡಿದ ತಕ್ಷಣ ಮಂದಸ್ಮಿತರಾಗಿ ಮಾತನಾಡಿದ ಪ್ರಧಾನಿಗಳು, ನಮ್ಮ ಕುಟುಂಬದವರ ಹೆಸರೆಲ್ಲಾ ನೆನಪಿನಲ್ಲಿಟ್ಟುಕೊಂಡು ವಿಚಾರಿಸಿದ್ದು ನನಗೆ ಆಶ್ಚರ್ಯವಾಯಿತು. ಈ ಭೇಟಿ ಸಮಯದಲ್ಲಿ ನಾನು ಚೆನೈನಲ್ಲಿರುವ ನಮ್ಮ ಅಂಜನಾಸುತ ಶ್ರೀ ಯೋಗಾಂಜನೇಯ ಮಂದಿರಂ ದೇವಸ್ಥಾನದ ಭಾವಚಿತ್ರವನ್ನು ನೀಡಿ, ನಮ್ಮ ದೇವಸ್ಥಾನಕ್ಕೆ ಬರಬೇಕೆಂದು ಆಹ್ವಾನಿಸಿದೆ. ಮುಂದಿನ ಸಲ ಚೆನ್ನೈಗೆ ಬಂದಾಗ ಖಂಡಿತವಾಗಿಯೂ ಬರುವದಾಗಿ ಹೇಳಿದರು. ಇದೇ ಸಮಯದಲ್ಲಿ ನನ್ನ ಮಗಳ ವಿವಾಹದ ವಿಷಯಯನ್ನು ಮೋದಿ ಅವರಿಗೆ ತಿಳಿಸಿದೆ. ಯಾವುದೇ ಪೂರ್ವನಿಯೋಜಿತ ಕಾರ್ಯಕ್ರಮ ಇಲ್ಲದಿದ್ದರೆ ಮದುವೆಗೆ ಬಂದು ವಧುವರರನ್ನು ಆಶೀರ್ವಾದಿಸುವುದಾಗಿ ಪ್ರಧಾನಿಗಳು ಹೇಳಿದರು. ಜನವರಿ 22 ಕೋಟ್ಯಾಂತರ ಭಾರತೀಯರ ಕನಸು ಈಡೇರುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ಬಹಳ ಸಂತೋಷವಾಗಿದೆ.

ನರೇಂದ್ರ ಮೋದಿ ಅವರು ಮಾತನಾಡಿಸಿದ ರೀತಿ, ಕಾರ್ಯದೊತ್ತಡದ ನಡುವೆಯೂ ಅವರಿಗಿರುವ ಅಸಾಧಾರಣ ನೆನಪಿನ ಶಕ್ತಿ ಎಲ್ಲವನ್ನು ಹತ್ತಿರದಿಂದ ನೋಡಿದ ಮೇಲೆ ಅವರ ಮೇಲಿರುವ ಗೌರವ ದುಪ್ಪಟ್ಟು ಆಯಿತು ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments