ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಅಪ್ಡೇಟ್ ಕೊಟ್ಟ ಪ್ರಮೋದ್ ಶೆಟ್ಟಿ.
ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ, TEASER COMMING SOON ಅಂತ ಕೂಡ ಅನೌನ್ಸ್ ಮಾಡಿದ್ದಾರೆ.
*ವಡ್ಡಾರಾಧಕ , ಶಬರಿಯಂತಹ ಕಿರುಚಿತ್ರಗಳಿಂದ ತಮ್ಮೂರಿನ ಕಥೆಗಳು ಎಲ್ಲಾ ಊರುಗಳಲ್ಲೂ ತಲುಪಬೇಕೆಂಬ ಆಶಯವುಳ್ಳ ಅನೀಶ್ ಎಸ್ ಶರ್ಮಾ ಈ ಸಿನಿಮಾದ ಮುಂದಾಳತ್ವ ವಹಿಸಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ ಸೂರಿ ಮತ್ತು ಸುನೀತ್ ಹಲಗೇರಿ ತಮ್ಮ ಸಂಸ್ಥೆ Gunnybag Studios ಮೂಲಕ ಹೊಸ ಹೊಸ ಪ್ರಯೋಗಗಳನ್ನು ತಮ್ಮ ಚೀಲದಲ್ಲಿ ತುಂಬಿಕೊಂಡು ಅದಕ್ಕೆ ಹಣ ಹೂಡುತ್ತಿದ್ದಾರೆ.
ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರನ್ನು ಹೊರತುಪಡಿಸಿ ರಾಘು ಶಿವಮೊಗ್ಗ, ಕಿರಣ್ ನಾಯ್ಕ್, ಮಂಜುನಾಥ್ ಹೆಗ್ಡೆ, ಚಂದ್ರಕಲಾ, ಕೆ ಜಿ ಕೃಷ್ಣಮೂರ್ತಿ ಮತ್ತು ಮುಂತಾದವರು ಬಣ್ಣ ಹಚ್ಚಿದ್ದಾರೆ. ಸುಮಂತ್ ಶರ್ಮಾ ಅವರ ಛಾಯಾಗ್ರಹಣ, ಚೇತನ್ ಕುಮಾರ್ ಸಂಗೀತ, ಸಂಜೀವ್ ಜಾಗಿರ್ದರ್ ಅವರ ಸಂಕಲನ ಈ ಚಿತ್ರಕ್ಕೆ ಶಕ್ತಿ ತುಂಬಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇನ್ನೇನು ತಮ್ಮ ಮೊದಲ ಟೀಸರ್ ಬಿಡುಗಡೆ ಮಾಡಲು ಸಿದ್ಧರಾಗುತ್ತಿದ್ದಾರೆ.