ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಚಿತ್ರ ಎನ್ನುತ್ತಾರೆ ನಾಯಕಿ ಚಾಂದಿನಿ .ಚಿತ್ರ ರೀ ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ನೆನಪುಗಳನ್ನು ಹಂಚಿಕೊಂಡ ನಟಿ .
ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A”. ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. 2024 ರ ಮೇ 17 ರಂದು “A” ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಾಯಕಿ ಚಾಂದನಿ ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇದು ನಾಯಕಿ ಚಾಂದಿನಿ ಜೀವನವೆನ್ನೇ ಬದಲಿಸಿದ ಒಂದು ಸಿನಿಮಾ. ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಅಂದರೆ ತಪ್ಪಾಗಲಾರದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಅಂತ ಸಿನಿಮಾ ಜಗತ್ತಿಗೆ ಉಪೇಂದ್ರ ರವರು ತೋರಿಸಿಕೊಟ್ಟರು. ಈ ಸಿನಿಮಾ ಆ ಕಾಲಕ್ಕೆ ಹೇಗೆ ಪ್ರಸ್ತುತವೋ, ಈ ಕಾಲಕ್ಕೂ ಕೂಡ ಈ ಸಿನಿಮಾ ಸಲ್ಲುತ್ತದೆ…
ನಾಯಕಿ ಚಾಂದಿನಿ “A” ಸಿನಿಮಾದಲ್ಲಿ ಹೇಗಿದ್ದರೋ, ಈಗಲು ಹಾಗೆ ಇದ್ದಾರೆ. ಅದಕ್ಕೆ ಅವರು ನೀಡುವ ಕಾರಣ, ನನ್ನ ಜೀವನವನ್ನೇ ಬದಲಿಸಿದಂತಹ ಸಿನಿಮಾ ಅದು. ಅದರಿಂದ ನನಗೆ ಸಿಕ್ಕ ಕನ್ನಡ ಜನರ ಪ್ರೀತಿ ಹಾಗು ಆ ಸಿನಿಮಾದ ಅ ಒಂದು ಫೇಮಸ್ ಡೈಲಾಗ್ “GOD IS GREAT” ಅನ್ನುವ ಹಾಗೆ, ಈ ಎರೆಡರ ಆಶೀರ್ವಾದದಿಂದ ನಾನು ಇವತ್ತಿಗೂ “A” ಚಾಂದಿನಿ ರೀತಿಯಲ್ಲೆ ಇದ್ದೀನಿ.
ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಅಂತಾರೆ ನಾಯಕಿ.
ಪ್ರಬುದ್ಧ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ. ಅಂದಿಗು ಇಂದಿಗೂ ನನ್ನ ಮೆಚ್ಚಿನ ನಿರ್ದೇಶಕ ಉಪೇಂದ್ರ ಅವರು. ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ “A” ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು “A” ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ಚಿರ ಋಣಿ.ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಮೇ 17 ಚಿತ್ರ ರೀ ರಿಲೀಸ್ ಆಗುತ್ತಿದೆ. ಈಗಲೂ ಭರ್ಜರಿ ಯಶಸ್ಸು ಕಾಣಲಿದೆ ಎಂದು ತಿಳಿಸಿದ ನಾಯಕಿ ಚಾಂದಿನಿ, ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ ಎನ್ನುತ್ತಾರೆ.