ದೀಪಾವಳಿ ಸಂಭ್ರಮದಲ್ಲಿ ಬಾಯ್ಸ್ ನಾಯಕಿ ರಾಧ್ಯಾ

ರಾಧ್ಯಾ ಎಂಬ ಸಾಂಸ್ಕೃತಿಕ ನಗರಿಯ,ಈ ಸುಂದರಿ ಕಮ್ ನಾಯಕಿ ಬಗ್ಗೆ ಬರೆಯುವ ಮೊದಲು, ಯಾವುದೇ ಪ್ರಾಜೆಕ್ಟ್ ಯಾವುದೇ ಆಗಲಿ,ನಾಯಕಿ ಅನ್ನೋ ಪಾತ್ರ ಎಷ್ಟು ಮುಖ್ಯ ಆಗುತ್ತದೆ ಎಂಬುದರ ಬಗ್ಗೆ ,ಸಣ್ಣ ಮಾಹಿತಿ ತಿಳಿಯೋಣ.

ಭಾರತೀಯ ಚಿತ್ರರಂಗದ ಯಾವುದೇ ಭಾಷೆಯ ಚಿತ್ರಗಳ ಯಶಸ್ಸಿನಲ್ಲಿ,ನಾಯಕರ, ನಿರ್ದೇಶಕರ,ನಿರ್ಮಾಪಕರ ಮತ್ತು ಇನ್ನಿತರರ ಪಾತ್ರ ಎಷ್ಟು,ಇಂಪಾರ್ಟೆಂಟ್ ಆಗಿರುತ್ತದೆಯೋ ಅಷ್ಟೇ ನಾಯಕಿಯರ ಪಾತ್ರವೂ ಅತ್ಯಂತ ಮಹತ್ವದ್ದು.

ನಾಯಕಿಯರು ಕೇವಲ ನಾಯಕನಿಗೆ ಜೋಡಿಯಾಗುವ ಪಾತ್ರಗಳಿಗೆ ಸೀಮಿತವಾಗದೆ. ಕಥೆಯ ತಿರುವು, ಭಾವನಾತ್ಮಕ ಸನ್ನಿವೇಶಗಳು, ಅಭಿನಯದ ಗಟ್ಟಿತನ ಹಾಗೂ ಪಾತ್ರದ ವೈವಿಧ್ಯತೆಯ ಮೂಲಕ ಸಿನಿಮಾದ ಒಟ್ಟಾರೆ ಯಶಸ್ಸಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಕ್ಕೆ ನಮ್ಮ ಕಣ್ಮುಂದೆ ಸಾಕಷ್ಟು ಉದಾಹರಣೆಗಳು ಇವೆ,

ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರತಿಭಾವಂತ ನಾಯಕಿಯರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಸಂಪಾದಿಸಿದ್ದಾರೆ. ಅದರಲ್ಲೂ ಮಹಿಳಾ ಪ್ರಧಾನ ಸಿನಿಮಾಗಳು,ವಿಭಿನ್ನ ಕಥಾಹಂದರ ಹಾಗೂ ಸವಾಲಿನ ಪಾತ್ರಗಳು ನಾಯಕಿಯರ ಅಭಿನಯ ಸಾಮರ್ಥ್ಯಕ್ಕೆ ಹೊಸ ವೇದಿಕೆ ಕಲ್ಪಿಸಿವೆ.

ತನ್ನ ಇಂಟೆನ್ಸ್ ಆದಂತಹ ನಟನೆ ಮತ್ತು ಸ್ಕ್ರೀನ್ ಪ್ರಸೆನ್ಸ್ ನಿಂದಾಗಿ,
ಕನ್ನಡ ಸೇರಿ ತೆಲುಗು ಭಾಷೆಯಲ್ಲಿಯೂ ಸಹ ಎರಡು ಪ್ರಾಜೆಕ್ಟ್ ಮಾಡ್ತಾ ಇರುವ ಕನ್ನಡತಿ ರಾಧ್ಯಾ ಸಧ್ಯ ರೂಪೇಶ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರು ಹಾಗೂ ಕಿಶೋರ್ ನಿರ್ದೇಶನದ ಬಾಯ್ಸ್ ಎಂಬ ಕ್ಯೂಟ್ ಚಿತ್ರದ ಮೇಲಿದೆ ಎಂದರೆ ತಪ್ಪಿಲ್ಲ..

ರೂಪೇಶ್ ಶೆಟ್ಟಿ ಒಬ್ಬ ಅದ್ಬುತ ನಟ ಅಷ್ಟೇ ಅಲ್ಲ ಆತನೊಬ್ಬ ತುಳು ಸೂಪರ್ ಸ್ಟಾರ್,ಒಳ್ಳೆಯ ಮನುಷ್ಯ ಕೂಡಾ,ರೂಪೇಶ್ ಡೆಡಿಕೇಶನ್ ನೋಡಿದಾಗ ನನಗೆ ಖುಷಿಯಾಗುತ್ತೆ,ನನ್ನ ವೃತ್ತಿ ಜೀವನದಲ್ಲಿ,ಬಾಯ್ಸ್ ಒಂದೊಳ್ಳೆ ಚಿತ್ರವಾಗಲಿದೆ ಎಂಬ ಭರವಸೆ ನನಗಿದೆ ಎಂಬ ರಾಧ್ಯಾ ಮಾತು ನಿಜಕ್ಕೂ ಎನರ್ಜಿ ಕೊಡುವಂತಾಗಿದೆ.

ಈ ಮುಂಚೆ ರಾಧ್ಯಾ ನಿರಂಜನ್ ಸುಧೀಂದ್ರ ( ಉಪೇಂದ್ರ ಸಹೋದರನ ಮಗ ) ನ ಜೊತೆಗೆ ನಮ್ಮ ಹುಡುಗರು ಚಿತ್ರದಲ್ಲಿ ನಟಿಸಿದ್ದು, ಕೋರೋನಾ ಸಮಯದಲ್ಲಿ ಬಂದು ಹೋದ ಆ ಚಿತ್ರ,ಪ್ರಮೋಷನ್ ಮಾಡುವ ವಿಚಾರದಲ್ಲಿಯೂ ಸ್ವಲ್ಪ ಎಡವಿತು ಹಾಗೂ ಥಿಯೇಟರ್ ಸಮಸ್ಯೆ ಕೂಡಾ ಚಿತ್ರಕ್ಕೆ ಆಯ್ತು ಎನ್ನುವ ಮಾತಿದೆ,

ಅಂದಹಾಗೆ ರಾಧ್ಯಾ ಎಲ್ಲ ಕನ್ನಡಿಗರಿಗೆ ಮತ್ತು ಸಿನಿಮಾ ಉದ್ಯಮಕ್ಕೆ ತಲುಪಿದ್ದು,
ಕಿರಣ್ ರಾಜ್ ಮುಖ್ಯ ಭೂಮಿಕೆಯಲ್ಲಿ ಬಂದ RONNY ಚಿತ್ರದ ಮೂಲಕ ಎಂಬುದು ಒಬ್ಬ ನಟಿಗೆ ಸಿಕ್ಕ ಖುಷಿ ಎನ್ನಬಹುದು.

ಆ ನಂತರ ರಾಧ್ಯಾ ಒಪ್ಪಿದೆ ತೆಲುಗು ಎರಡು ಸಿನಿಮಾಗಳು ಅನ್ನೋದೇ ವಿಶೇಷ.

ಇತ್ತೀಚೆಗೆ ಬಾಯ್ಸ್ ಚಿತ್ರ ತಂಡದ ಜೊತೆಗೆ ತುಮಕೂರಿನ ಶ್ರೀ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಿಡುಗಡೆಯಾದ ನಾಯಕ ರೂಪೇಶ್ ಫಸ್ಟ್ ಲುಕ್ ಬಗ್ಗೆ,ತುಂಬಾ ಕುತೂಹಲದಿಂದ ಮಾತನಾಡುವ ರಾಧ್ಯಾ,
ಅಲ್ಲಿ ಸೇರಿದ್ದ ಸಿನಿಮಾ ಅಭಿಮಾನಿಗಳು ನನ್ನನ್ನ ಗುರುತಿಸಿ,ರಾಧ್ಯಾ ರಾಧ್ಯಾ ಅಂತಾ ಕೂಗ್ತಾ ಇದ್ದದ್ದು ನೋಡಿ,ನಾನೊಬ್ಬ ನಟಿಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದರು.

ಅಭಿಮಾನಿಗಳು ಕೊಡುವ ಪ್ರೀತಿ,ಗೌರವ ನನ್ನಂತಹ ಹೊಸ ಮತ್ತು ಉತ್ಸಾಹಿ ನಟಿಗೆ ದೊಡ್ಡ ಸಪೋರ್ಟ್ ಎಂಬ ಮಾತು ಹೇಳಿದಾಗ,ನಮಗೆ ಅನ್ನಿಸಿದ್ದು ರಾಧ್ಯಾ ಮುಂದಿನ ದಿನಗಳಲ್ಲಿ ತುಂಬಾ ಒಳ್ಳೆಯ ನಾಯಕಿ ನಟಿಯಾಗಿ ನಿಲ್ಲುತ್ತಾಳೆ ಎಂದು.

ದೀಪಾವಳಿ ಸಂಭ್ರಮದಲ್ಲಿರುವ ರಾಧ್ಯಾ,ತಾನು ಎಲ್ಲ ಹಬ್ಬಗಳನ್ನು ಸಡಗರದಿಂದಲೇ ಆಚರಿಸುತ್ತೇನೆ,ಅದರಲ್ಲೂ ಮೈಸೂರು ದಸರಾ / ನವರಾತ್ರಿ ನಂತರ ಬರುವ ದೀಪಾವಳಿ,ಎಲ್ಲರ ಬಾಳಲ್ಲೂ ಬೆಳಕು ತರಲಿ ಎಂದು ಹಾರೈಸಿದರು.

ಬಾಯ್ಸ್ ಒಂದೊಳ್ಳೆ ಕಥೆ ಹೊಂದಿರುವ,ಸ್ನೇಹ,ಪ್ರೀತಿ,ತ್ಯಾಗ ಮತ್ತು ಕುಟುಂಬದ ಮೌಲ್ಯ ಹೇಳುವ ಕಥೆ,ಬಾಯ್ಸ್ ರಿಲೀಸ್ ಆದ್ಮೇಲೆ ನೋಡಿ ಎಲ್ಲರೂ ಎಂಜಾಯ್ ಮಾಡುತ್ತೀರಿ ಹಾಗೆ ಇದೊಂದು ಕುಟುಂಬ ಸಮೇತ ನೋಡುವ ಚಿತ್ರ ಎಂದರು ರಾಧ್ಯಾ.

ಮತ್ತೊಂದು ವಿಷ್ಯ,ನಾನು ಅಪ್ಪಟ ಕನ್ನಡ ಅಭಿಮಾನಿ,
ನನ್ನ ಗಮನ ಏನಿದ್ದರೂ ಇಲ್ಲೇ,ಇತ್ತೀಚಿಗೆ ಸಾಕಷ್ಟು ಕನ್ನಡ ಕಥೆಗಳನ್ನು ಕೇಳಿದ್ದೀನಿ,ಇನ್ನೇನು ಕೆಲವು ಫೈನಲ್ ಆಗಬೇಕು ಎಂದು ಹೇಳಿ,ತಮ್ಮ ಮಾತಿಗೆ ವಿರಾಮ ಹೇಳಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted