ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಇಶಾ ಲಂಕೇಶ್ ನಾಯಕಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ “ಫಿಸಿಕ್ಸ್ ಟೀಚರ್” ಸುಮುಖ ನಾಯಕ. .

ಸದಭಿರುಚಿಯ ಚಿತ್ರಗಳ ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ನೂತನ ಚಿತ್ರದ ನಾಯಕಿಯಾಗಿ ಹೆಸರಾಂತ ಲೇಖಕ, ಪತ್ರಕರ್ತ ಪಿ.ಲಂಕೇಶ್ ಮೊಮ್ಮಗಳು, ನಿರ್ದೇಶಕಿ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ನಟಿಸುತ್ತಿರುವ ಮಾಹಿತಿ ಇತ್ತೀಚೆಗಷ್ಟೇ ಚಿತ್ರತಂಡ ನೀಡಿತ್ತು. ಇದು ಇಶಾ ಅವರ ಅಭಿನಯದ ಚೊಚ್ಚಲ ಚಿತ್ರ ಕೂಡ. ನಾಯಕಿಯ ಹೆಸರನ್ನು ತಿಳಿಸಿದ ಚಿತ್ರತಂಡ ನಾಯಕನ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಈ ಚಿತ್ರದ ನಾಯಕ ಯಾರು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. “ಫಿಸಿಕ್ಸ್ ಟೀಚರ್” ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಯೋಗರಾಜ್ ಭಟ್ ನಿರ್ದೇಶನದ “ಮನದ ಕಡಲು” ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಸುಮುಖ ಈ ನೂತನ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿರುವ ಸುಮುಖ, ಮಲೆಯಾಳಂ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

ನಿಧಿ ಫಿಲಂಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಂಗನಾಥ್ ಕೆಂಪನಹಳ್ಳಿ(ಆರ್ ಕೆ) ಹಾಗೂ ಅಥರ್ವ ಆರ್ ಕೆಂಪನಹಳ್ಳಿ(ಎ ಆರ್ ಕೆ) ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುಮುಖ ಹಾಗೂ ಇಶಾ ಲಂಕೇಶ್ ನಾಯಕ – ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಸೇರಿದಂತೆ ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಕುರಿತು ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಪ್ರೀತಂ ಗುಬ್ಬಿ ತಿಳಿಸಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted