“ಟಾಕ್ಸಿಕ್” ಚಿತ್ರದ ಜೊತೆಗೆ “ಜಾಕಿ 42” ಚಿತ್ರದ ಥಿಯೇಟರಿಕಲ್ ಟ್ರೇಲರ್ ರಾಜ್ಯದಾದ್ಯಂತ ಬಿಡುಗಡೆ

“ಟಾಕ್ಸಿಕ್” ನಡುವೆ “ಜಾಕಿ‌42” ಟ್ರೇಲರ್ ಚಿತ್ರಮಂದಿರಗಳಲ್ಲಿ ..
“ಟಾಕ್ಸಿಕ್” ಚಿತ್ರಮಂದಿರಗಳಲ್ಲಿ “ಜಾಕಿ 42” ಟ್ರೇಲರ್ .
ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್…
ಎಲ್ಲೆಲ್ಲೂ ಟಾಕ್ಸಿಕ್ ಮಯ… ನಾಳೆಯಿಂದ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ ಜಾಕಿ 42 ಚಿತ್ರದ ಥಿಯೇಟರಿಕಲ್ ಟ್ರೇಲರ್ ಪ್ರದರ್ಶನವಾಗುತ್ತಿದೆ…

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ ‘ಜಾಕಿ 42’ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.
‌‌ ಇದು ಕುದುರೆ ರೇಸ್ ಹಿನ್ನೆಲೆಯ ಕಥಾಹಂದರದ ಚಿತ್ರ. ನನಗೆ ತಿಳಿದ ಹಾಗೆ ಭಾರತೀಯ ಚಿತ್ರರಂಗದಲ್ಲೇ ಯಾವ ಚಿತ್ರದಲ್ಲೂ ಕುದುರೆ ರೇಸ್ ಕುರಿತು ಇಡೀ ಸಿನಿಮಾ ಬಂದಿಲ್ಲ. ನಮ್ಮ ಇಡೀ ಸಿನಿಮಾ ಕುದುರೆ ರೇಸ್ ಸುತ್ತ ಸಾಗುತ್ತದೆ. ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಟವಾದ ಚಿತ್ರಕಥೆಯಿರುವ ಚಿತ್ರವಿದು. ಟಾಕ್ಸಿಕ್ ನೋಡೋ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಲಿದೆ ಹಾಗೂ ಥಿಯೇಟರಲ್ಲೇ “ಜಾಕಿ 42” ಸಿನಿಮಾವನ್ನ ನೋಡಬೇಕು ಅಂತ ಪ್ರೇರಪಿಸಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.

“ಜಾಕಿ 42 “ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ “ಜಾಕಿ 42” ಚಿತ್ರದ ಎರಡು ಹಾಡುಗಳು ಗಮನ ಸೆಳೆದಿದ್ದು, ಟಾಕ್ಸಿಕ್ ಸಿನಿಮಾದ ಥಿಯೇಟರ್ ಗಳಲ್ಲಿ ಟ್ರೇಲರ್ ಪ್ರದರ್ಶಿಸುವ ಮೂಲಕ “ಜಾಕಿ 42” ಚಿತ್ರದ ಪ್ರಚಾರವನ್ನು ಆರಂಭಿಸಿದ್ದಾರೆ..

ಅಂದ ಹಾಗೆ ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಅಣಿಯಾಗಿರುವ ಚಿತ್ರತಂಡ, ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡೋ ಯೋಜನೆಯಲ್ಲಿದೆ… ಅದೇನೆ ಇದ್ರೂ ಟಾಕ್ಸಿಕ್ ನೋಡೋ ಕನ್ನಡ ಪ್ರೇಕ್ಷಕರಿಗೆ ಥಿಯೇಟರ್ ಗಳಲ್ಲಿ “ಜಾಕಿ 42” ಅಚ್ಚರಿ ಕಾದಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted