ರಮೇಶ್ ಅರವಿಂದ್ ಅಭಿನಯದ “ದೈಜಿ” ಚಿತ್ರದಲ್ಲಿ ಖುಷಿ ರವಿ

ಆಧ್ಯಾತ್ಮಿಕ ಹಿನ್ನೆಲೆಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ “ದಿಯಾ” ಖ್ಯಾತಿಯ ಬೆಡಗಿ .

ನಟ ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರ “ದೈಜಿ” ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.‌ ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್, ಗುರು ದೇಶಪಾಂಡೆ ಮುಂತಾದವರ ಅಭಿನಯವಿರುವ ಈ ಚಿತ್ರದಲ್ಲಿ “ದಿಯಾ” ಖ್ಯಾತಿಯ ಖುಷಿ ರವಿ ಕೂಡ ಅಭಿನಯಿಸಿದ್ದಾರೆ.”Spiritual base” ಆಧ್ಯಾತ್ಮಿಕ ಹಿನ್ನೆಲೆಯ ವಿಶೇಷ ಪಾತ್ರದಲ್ಲಿ ಖುಷಿ ಅವರು ನಟಿಸಿದ್ದಾರೆ.

ವಿಬಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿರುವ ಹಾಗೂ “ಶಿವಾಜಿ ಸುರತ್ಕಲ್” ಖ್ಯಾತಿಯ ಆಕಾಶ್‌ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಉಳಿದ ಚಿತ್ರೀಕರಣ ಪೂರ್ಣವಾಗಿದೆ.‌ ವಿ.ಎಫ್.ಎಕ್ಸ್ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಆ ಕೆಲಸದ ಮೇಲೆ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಲಿದೆ.
ಜ್ಯೂಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಮೂರು ಜನ ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ “ದೈಜಿ” ಚಿತ್ರಕ್ಕಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments